ಕುಂದಗೋಳ: ಹುಟ್ಟಿನಿಂದಲೇ ದೃಷ್ಟಿ ದೋಷ ಹೊಂದಿದ್ದ ತಾಲೂಕಿನ ಕೊಂಕಣಕುರಹಟ್ಟಿ ಗ್ರಾಮದ ವಿಜಯಲಕ್ಷ್ಮೀ ಬಾಳಿನಲ್ಲಿ ಈಗ ಬೆಳಕು ಮೂಡಿದೆ.
ವಿಜಯಲಕ್ಷ್ಮೀ ಅವರಿಗೆ ಜನಿಸಿದಾಗಲೇ ಅಲ್ಪ ಪ್ರಮಾಣದ ದೃಷ್ಟಿ ದೋಷವಿತ್ತು. ಪ್ರಾಥಮಿಕ ಶಾಲೆ ಕಲಿಯುವಾಗ ಕಣ್ಣಿನ ದೃಷ್ಟಿ ಕಡಿಮೆಯಾಗಿ, ಪ್ರೌಢಶಾಲೆಗೆ ಬರುವ ವೇಳೆಗೆ ಹತ್ತಿರದವರನ್ನು ಗುರುತು ಹಿಡಿಯಲಾರದಷ್ಟು ಕಣ್ಣು ಮಂಜಾದವು. ಪಾಲಕರು ಕುಂದಗೋಳ, ಹುಬ್ಬಳ್ಳಿ, ಬೆಂಗಳೂರಿನ ವಿವಿಧೆಡೆ ಚಿಕಿತ್ಸೆಗೆಂದು ಅಲೆದಾಡಿದರೂ ಪ್ರಯೋಜನವಾಗಲಿಲ್ಲ.
ಕೆಪಿಸಿಸಿ ಕಾರ್ಯದರ್ಶಿ ಸ್ಪಂದನೆ: ತಂದೆ ವೆಂಕನಗೌಡ ಗೌಡಪ್ಪಗೌಡ್ರ ಅವರು ರೊಟ್ಟಿಗವಾಡದ ಬಾಬಣ್ಣ ಬೆಟಗೇರಿ ಅವರ ಬಳಿ ಮಗಳ ನೋವು ತೋಡಿಕೊಂಡರು. ಬಾಬಣ್ಣ ಅವರು ಕೆಪಿಸಿಸಿ ಕಾರ್ಯದರ್ಶಿ ಷಣ್ಮುಖ ಶಿವಳ್ಳಿ ಅವರಲ್ಲಿ ಈ ಕುರಿತು ತಿಳಿಸಿದ್ದಾರೆ. ಅದಕ್ಕೆ ಷಣ್ಮುಖ ಶಿವಳ್ಳಿಯವರು ಸ್ಪಂದಿಸಿ, ತಾವೇ ಖುದ್ದಾಗಿ ಕಿಮ್್ಸ ಆಸ್ಪತ್ರೆಯ ನೇತ್ರ ತಜ್ಞ ರಾಜಶೇಖರ ದ್ಯಾಬೇರಿ ಅವರ ಬಳಿ ಯುವತಿಯನ್ನು ಕರೆದುಕೊಂಡು ಹೋಗಿ ಚಿಕಿತ್ಸೆ ಮಾಡಿಸಿದರು. ಆಗ ನೇತ್ರ ತಜ್ಞ ರಾಜಶೇಖರ ಅವರ ಮಾರ್ಗದರ್ಶನದಂತೆ ಬೆಂಗಳೂರಿನ ಕೆ.ಆರ್. ಮಾರ್ಕೆಟ್ನಲ್ಲಿರುವ ಮಿಂಟೋ ಹಾಸ್ಪಿಟಲ್ನ ನೇತ್ರ ತಜ್ಞ ಡಾ. ಜಿ. ಸುರೇಶಬಾಬು ಹತ್ತಿರ ಬಳಿ ಕರೆದೊಯ್ದು ವಿಜಯಲಕ್ಷ್ಮೀಯ ಕಣ್ಣಿನ ಶಸ್ತ್ರ ಚಿಕಿತ್ಸೆ ಮಾಡಿಸಿ ಅವಳ ಬಾಳಿನಲ್ಲಿ ಬೆಳಕು ಮೂಡುವಂತೆ ಮಾಡಿದ್ದಾರೆ.
ಒಂದೂ ರೂಪಾಯಿಯನ್ನೂ ಖರ್ಚು ಮಾಡಿಸದೆ ಯುವತಿ ವಿಜಯಲಕ್ಷ್ಮೀಯ ಕಣ್ಣಿನ ದೋಷ ಹೋಗಲಾಡಿಸಿ ಅವಳ ಬದುಕಲ್ಲಿ ಬೆಳಕು ಮೂಡುವಂತೆ ಮಾಡಿದ್ದಾರೆ.
ನನ್ನಪ್ಪ ಅನೇಕ ಕಣ್ಣಿನ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಲಕ್ಷಾಂತರ ರೂ. ಖರ್ಚು ಮಾಡಿದರೂ ಪ್ರಯೋಜನ ಆಗಿರಲಿಲ್ಲ. ಷಣ್ಮುಖ ಶಿವಳ್ಳಿ ಅವರು ದೇವರಂತೆ ಬಂದು ಉಚಿತವಾಗಿ ಕಣ್ಣಿನ ಆಪರೇಷನ್ ಮಾಡಿಸಿ, ದೃಷ್ಟಿ ಭಾಗ್ಯ ಕರುಣಿಸಿದ್ದಾರೆ. ನಾನೀಗ ಪ್ರಪಂಚವನ್ನು ನೋಡುವಂತಾಗಿದೆ. | ವಿಜಯಲಕ್ಷ್ಮೀ ಗೌಡಪ್ಪಗೌಡ್ರ ದೃಷ್ಟಿ ದೋಷ ಹೊಂದಿದ್ದ ವಿಜಯಲಕ್ಷ್ಮೀಗೆ ವೈದ್ಯರು ಮಾಡಿದ ಶಸ್ತ್ರ ಚಿಕಿತ್ಸೆ ಯಶಸ್ವಿಯಾಗಿದೆ. ಆಕೆ ಪ್ರಪಂಚವನ್ನು ನೋಡುವಂತಾಗಿದೆ. ದೇವರ ದಯೆಯಿಂದ ಒಳ್ಳೆಯದಾಗಿದೆ. ಅವಳು ಚೆನ್ನಾಗಿ ಓದಿ ಒಳ್ಳೆಯ ಭವಿಷ್ಯ ರೂಪಿಸಿಕೊಳ್ಳಬೇಕು. ನನ್ನ ಶಕ್ತಿ ಹಾಗೂ ಅಣ್ಣ ಸಿ.ಎಸ್. ಶಿವಳ್ಳಿಯವರ ಹಾದಿಯಲ್ಲಿ ಸಾಗಿ, ದೇವರ ಕೃಪೆಯಿಂದ ಸಮಾಜ ಸೇವೆ ಸಲ್ಲಿಸುತ್ತಿದ್ದೇನೆ. | ಷಣ್ಮುಖ ಶಿವಳ್ಳಿ, ಕೆಪಿಸಿಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ದೃಷ್ಟಿ ದೋಷದಿಂದ ಬಳಲುತ್ತಿದ್ದ ವಿಜಯಲಕ್ಷ್ಮೀ ಅವರನ್ನು ಹತ್ತಾರು ಕಣ್ಣಿನ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಕೊಡಿಸಿದರೂ ಪ್ರಯೋಜನವಾಗಿರಲಿಲ್ಲ. ನನ್ನ ಕಣ್ಣು ಕೊಟ್ಟು ಅವಳಿಗೆ ಕಣ್ಣು ಕಾಣುವಂತೆ ಮಾಡುವ ಮನಸ್ಥಿಗೆ ಬಂದಿದ್ದೆ. ಆಗ ಷಣ್ಮುಖ ಶಿವಳ್ಳಿಯವರು ಮಗಳ ಪಾಲಿಗೆ ದೇವರಂತೆ ಬಂದು ನೆರವಾದರು. | ವೆಂಕನಗೌಡ ಗೌಡಪ್ಪಗೌಡ ವಿಜಯಲಕ್ಷ್ಮೀ ತಂದೆ