ಜಿಲ್ಲೆ

ಧರ್ಮ, ನೀತಿಯ ವಿಜಯವೇ ವಿಜಯದಶಮಿ

ವಿಜಯಪುರ:ಧರ್ಮ ಮತ್ತು ನೀತಿಯ ವಿಜಯವೇ ವಿಜಯದಶಮಿ ಎಂದು ಕನ್ನಡ ಸಾಹಿತ್ಯ ಪರಿಷತ್​ ಗೌರವ ಕಾರ್ಯದರ್ಶಿ ಶಿಲ್ಪಾ ಭಸ್ಮೆ ಹೇಳಿದರು.

ನಗರದ ಜ್ಞಾನಯೋಗಾಶ್ರಮದಲ್ಲಿ ಮಹಾನವಮಿ ನಿಮಿತ್ತ ಮಂಗಳವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ದಸರಾ ಹಬ್ಬದ ಐತಿಹಾಸಿಕ ಹಿನ್ನೆಲೆ ಕುರಿತು ಕಾರ್ಯಕ್ರಮದಲ್ಲಿ ಅವರು ಉಪನ್ಯಾಸ ನೀಡಿದರು.

ರಾಮಾಯಣದಲ್ಲಿ 14 ವರ್ಷ ವನವಾಸಕ್ಕೆಂದು ರಾಮ ಸೀತೆ ಲಕ್ಷ$್ಮಣರು ಕಾಡಿಗೆ ತೆರಳಿದಾಗ ಸೀತೆಯನ್ನು ಅಪಹರಿಸಿದ ರಾವಣನನ್ನು ಸದೆಬಡಿಯಲು ಶ್ರೀರಾಮರು ಶರಣ್​ ನವರಾತ್ರಿ ವ್ರತ ಆಚರಿಸಿ, ವಿಜಯ ದಶಮಿ ಎಂದು ರಾವಣನನ್ನು ಸಂಹರಿಸಿದ್ದು ಒಂದು ಪೌರಾಣಿಕ ಟನೆಯಾಗಿದೆ ಎಂದು ತಿಳಿಸಿದರು.

ಮಹಾಭಾರತದಲ್ಲಿ ಪಾಂಡವರು 12 ವರ್ಷಗಳ ವನವಾಸದ ನಂತರ ಒಂದು ವರ್ಷ ಅಜ್ಞಾತವಾಸ ಕಳೆಯುವ ಸಂದರ್ಭ ಮಚ್ಚೆ ದೇಶದ ವಿರಾಟರಾಜನ ಆಶ್ರಯದಲ್ಲಿರುವಾಗ ಕುರು ಸೇನೆಯು ವಿರಾಟರಾಜನ ರಾಜ್ಯವನ್ನು ಮುತ್ತಿಗೆ ಹಾಕಿತು. ಆಗ ಬೃಹನ್ನಳ ವೇಷದ ಅರ್ಜುನನು ಯುದ್ಧಕ್ಕೆ ಹೊರಡುವಾಗ ಬನ್ನಿ ಮರದಲ್ಲಿ ತಾವು ಇರಿಸಿದ ಶಸಗಳನ್ನು ತೆಗೆದುಕೊಂಡು ಬನ್ನಿ ಮರಕ್ಕೆ ಕೈಮುಗಿದು ಯುದ್ಧಕ್ಕೆ ತೆರಳಿದ್ದು ಇದೇ ವಿಜಯದಶಮಿಯ ದಿನ ಎನ್ನುವುದು ಮಹತ್ವದ ಸಂಗತಿಯಾಗಿದೆ ಎಂದರು.

ಶಿಲ್ಪಾ ಭಸ್ಮೆ

ಅಖಿಲ ಭಾರತ ವೀರಶೈವ ಮಹಾಸಭಾ ಅಧ್ಯಕ್ಷ ವಿ.ಸಿ. ನಾಗಠಾಣ ಅಧ್ಯಕ್ಷತೆ ವಹಿಸಿದ್ದರು. ಬಸವಲಿಂಗ ಮಹಾಸ್ವಾಮಿಜಿ ಆಶೀರ್ವಚನ ನೀಡಿದರು.