ಚಿಕ್ಕಮಗಳೂರು ಹೊರವಲಯದ ಬೀಕನಹಳ್ಳಿಯಲ್ಲಿ ಶನಿವಾರ ರಾತ್ರಿ ದಸರಾ ಮೆರವಣಿಗೆ ಅದ್ಧೂರಿಯಾಗಿ ನಡೆಯಿತು. ಮೆರವಣಿಗೆಯಲ್ಲಿ ಶಾಸಕ ಎಚ್.ಡಿ.ತಮ್ಮಯ್ಯ, ಎಂಎಲ್‌ಸಿ ಸಿ.ಟಿ.ರವಿ, ಮಾಜಿ ಎಂಎಲ್‌ಸಿ ಗಾಯತ್ರಿ ಶಾಂತೇಗೌಡ, ಪ್ರಮುಖರಾದ ಎಚ್.ಪಿ.ಮಂಜೇಗೌಡ, ಸೋಮಶೇಖರ್, ಬಿ.ಪಿ.ನಂಜಪ್ಪ ಮತ್ತಿತರರಿದ್ದರು. 
ಜಿಲ್ಲೆ

ದುಷ್ಟ ಸಂಹಾರ, ಶಿಷ್ಟ ರಕ್ಷಣೆಯಾದ ಸಂಕೇತ ವಿಜಯದಶಮಿ

ಚಿಕ್ಕಮಗಳೂರು: ಮೈಸೂರು ದಸರ ಮಾದರಿಯಲ್ಲಿಯೇ ಬೀಕನಹಳ್ಳಿ ಗ್ರಾಮದಲ್ಲಿ ದಸರಾ ಮಹೋತ್ಸವ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಶನಿವಾರ ರಾತ್ರಿ ವಿಶೇಷ ದೀಪಾಲಂಕಾರದಿAದ ಗ್ರಾಮವು ಕಂಗೊಳಿಸುತ್ತಿತ್ತು. ಚಿಕ್ಕಮಕ್ಕಳು ಆರತಿ ತಟ್ಟೆಯೊಂದಿಗೆ ಮೆರವಣಿಗೆಗೆ ಹೆಜ್ಜೆ ಹಾಕಿದರೆ, ಯುವಕ ಯುವತಿಯರು ಹಾಗೂ ಗ್ರಾಮಸ್ಥರು ಡಿ.ಜೆಗೆ ಹೆಜ್ಜೆ ಹಾಕಿದರು. ಮದ್ದು ಗುಂಡು ಮತ್ತು ಪಟಾಕಿಗಳನ್ನು ಸಿಡಿಸಿ ಸಂಭ್ರಮಿಸಿದರು.

ಬೀಕನಹಳ್ಳಿಯಲ್ಲಿ ಶನಿವಾರ ರಾತ್ರಿ ದಸರಾ ಮೆರವಣಿಗೆಗೆ ಚಾಲನೆ ನೀಡಿ ಮಾತನಾಡಿದ ಶಾಸಕ ಎಚ್.ಡಿ.ತಮ್ಮಯ್ಯ, ದುಷ್ಟರ ಸಂಹಾರ, ಸಜ್ಜನರ ರಕ್ಷಣೆ ಮಾಡುವ ದಿನವೇ ವಿಜಯ ದಶಮಿ ಎಂದು. ಕಳೆದ ೭೩ ವರ್ಷದಿಂದ ಬೀಕನಹಳ್ಳಿಯಲ್ಲಿ ದಸರಾ ಮಹೋತ್ಸವ ನಡೆಯತ್ತಿದೆ. ತಾಯಿ ಚಾಮುಂಡೇಶ್ವರಿ ಮೆರವಣಿಗೆಯಲ್ಲಿ ಬನ್ನಿಮಂಟಪದವರೆಗೆ ಹೋದ ನಂತರ ಅಲ್ಲಿ ಅಂಬು ಒಡೆಯಲಾಗುತ್ತದೆ. ವಿಜೃಂಭಣೆಯ ವಿಜಯದಶಮಿ ನಡೆಯುತ್ತದೆ ಎಂದರು.
ಚಾಮುAಡೇಶ್ವರಿ ೯ ಅವತಾರಗಳನ್ನೆತ್ತಿ ಬಂದು ದುಷ್ಟಶಕ್ತಿಗಳನ್ನು ಸಂಹರಿಸಿ, ಶಿಷ್ಟ ಶಕ್ತಿಗಳನ್ನು ರಕ್ಷಿಸುವ ದಿನವೇ ವಿಜಯದಶಮಿ. ಮೈಸೂರಿನ ಮಾದರಿಯಲ್ಲೇ ಬೀಕನಹಳ್ಳಿಯಲ್ಲಿ ದಸರಾ ಆಚರಣೆಗಳು ನಡೆಯುತ್ತವೆ. ನಾಡಿನ ಸಂಸ್ಕೃತಿ, ಆಚಾರ, ವಿಚಾರಗಳನ್ನು ಮುಂದಿನ ಪೀಳಿಗೆಗೆ ತಲುಪಿಸುವ ಕೆಲಸವನ್ನು ಹಿರಿಯರು ಮಾಡುತ್ತಿದ್ದಾರೆ ಎಂದು ಶ್ಲಾಘಿಸಿದರು.
ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಮಾತನಾಡಿ, ವಿಜಯನಗರ ಅರಸರ ಕಾಲದಿಂದಲೂ ಶ್ರೀಚಾಮುಂಡೇಶ್ವರಿ ದೇವಿಗೆ ವಿಶೇಷ ಪೂಜಾ ಕೈಂಕರ್ಯಗಳು ನಡೆದು ಬಂದಿವೆ. ನಾಡಿನ ಸಂಸ್ಕೃತಿ, ಸಂಸ್ಕಾರ, ಆಚಾರ ವಿಚಾರಗಳನ್ನು ಉಳಿಸುವ ಕೆಲಸ ಅನಾದಿಕಾಲದಿಂದಲೂ ನಡೆದುಬಂದಿದೆ. ಬೀಕನಹಳ್ಳಿಯಲ್ಲಿ ಕಳೆದ ೭೩ ವರ್ಷದಿಂದ ವೈಭವದ ದಸರಾ ಆಚರಣೆ ಮಾಡಲಾಗುತ್ತಿದೆ. ಮೆರವಣಿಗೆ ನಂತರ ಅಂಬು ಒಡೆಯುವ ಧಾರ್ಮಿಕ ಕಾರ್ಯ ನಡೆಯುತ್ತಿರುವುದು ಸಂತೋಷದ ವಿಚಾರ ಎಂದು ಹೇಳಿದರು.
ವಿಧಾನಪರಿಷತ್ ಮಾಜಿ ಸದಸ್ಯೆ ಗಾಯತ್ರಿ ಶಾಂತೇಗೌಡ ಮಾತನಾಡಿ, ಈ ಕ್ಷೇತ್ರದಲ್ಲಿ ತಾಯಿ ನೆಲೆಸಿರುವುದರಿಂದ ಈ ಭಾಗದ ಸುತ್ತಮುತ್ತಲ ಹಳ್ಳಿಗಳ ಜನರಲ್ಲಿ ಭಯ, ಭಕ್ತಿ, ಶ್ರದ್ಧೆ ತುಂಬಿದೆ. ಅಮ್ಮನವರ ಶಕ್ತಿಯನ್ನು ನಂಬಿರುವ ಸಹಸ್ರಾರು ಮಂದಿ ಇದ್ದಾರೆ. ಎಲ್ಲರಿಗೂ ತಾಯಿ ಚಾಮುಂಡೇಶ್ವರಿ ಆರೋಗ್ಯ, ಆಯಸ್ಸು ನೀಡಲಿ ಎಂದು ಪ್ರಾರ್ಥಿಸಿದರು.
ದೇವಸ್ಥಾನ ಸಮಿತಿಯ ಎಚ್.ಪಿ.ಮಂಜೇಗೌಡ ಮಾತನಾಡಿ, ಬೀಕನಹಳ್ಳಿಯಲ್ಲಿ ಶ್ರೀ ಚಾಮುಂಡೇಶ್ವರಿ ದೇವರಿಗೆ ನವರಾತ್ರಿಯ ೯ ದಿನಗಳು ವಿಶೇಷ ಅಲಂಕಾರ ಮಾಡಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು ಎಂದರು.
ಜಿಪA ಮಾಜಿ ಉಪಾಧ್ಯಕ್ಷ ಸೋಮಶೇಖರ್, ಚಾಮುಂಡೇಶ್ವರ ಸುಕ್ಷೇತ್ರದ ಅಧ್ಯಕ್ಷ ಬಿ.ಪಿ.ನಂಜಪ್ಪ, ಉಪಾಧ್ಯಕ್ಷ ಬಿ.ಎಚ್.ಗುರುಬಸಪ್ಪ, ಕಾರ್ಯದರ್ಶಿ ಬಿ.ಎಂ.ಯೋಗಾನAದ್, ಖಜಾಂಚಿ ಬಿ.ಎಚ್.ಸೋಮೇಗೌಡ, ಸದಸ್ಯರಾದ ನಂಜುAಡಪ್ಪ, ಗುರುಸಿದ್ಧಪ್ಪ, ಯತೀರಾಜ್, ಲೋಕನಾಥ್, ರಂಗಪ್ಪ, ನಾಗರಾಜ್, ಪರಮೇಶ್ವರಪ್ಪ, ವಿಜಯ್‌ಕುಮಾರ್, ಚಂದ್ರಾಚಾರಿ, ಲಲಿತಾಬಸವರಾಜ್, ರಾಜೀವ್, ಜಿಪಂ ಮಾಜಿ ಉಪಾಧ್ಯಕ್ಷ ಸೋಮಶೇಖರಪ್ಪ, ನಾಗಭೂಷಣ, ಮಲ್ಲಿಕಾರ್ಜುನ ಮತ್ತಿತರರಿದ್ದರು.