ಜಿಲ್ಲೆ

ಸಂತೋಷಜೀವನಕ್ಕೆ ಸಂಗೀತವೇ ಸಂಪತ್ತು: ಪಾರ್ವತಿದೇವಿ

Gadag - Shivanand Hiremath

ಗದಗ: ಮಾನವನ ಮನಸ್ಸಿನ ಆನಂದವನ್ನು ಕಂಡು ಕೊಳ್ಳುವದು ತುಂಬ ಕಠಿಣ ಅದನ್ನು ಎಲ್ಲು ಹುಡುಕಿದರೂ ಸಿಗುವದಲ್ಲ ಅಂತಹ ಸಂಗೀತ ಕಲೆ ಕಲಿಯುವದು ಮತ್ತು ಆಲಿಸುವ ಹವ್ಯಾಸವಿರಬೇಕು. ನಮ್ಮ ನೆಮ್ಮದಿಯ ಜೀವನಕ್ಕೆ ಸಂಗೀತವೇ ಒಂದು ಮದ್ದು ಅದುವೇ ಆರೋಗ್ಯದ ಸಂಪತ್ತು.ಆದ್ದರಿAದ ಸಂಗೀತವನ್ನು ಮಕ್ಕಳಿಗೆ ಕಲಿಸಿ ನೀವೂ ಸಂಗೀತ ಆಸ್ವಾದಿಸುವ ಮನೋಭಾವ ಬೆಳಸಿಕೊಳ್ಳಿ ಎಂದು ಗಾಯಕಿ ಶ್ರೀಮತಿ ಪಾರ್ವತಿದೇವಿ ಮಾಳೆಕೊಪ್ಪಮಠ ಮಾತನಾಡಿದರು.
ವಿಜಯ ಕಲಾ ಮಂದಿರ ಸಂಸ್ಥೆ, ಗದಗ , ರಾಘವೇಂದ್ರ ಸಂಗೀತ ಪಾಠ ಶಾಲೆ, ಚೈತನ್ಯ ಸಂಗೀತ ಪಾಠ ಶಾಲೆ ಹಾಗೂ ಅನನ್ಯ ಸಂಗೀತ ಪಾಠ ಶಾಲೆ ಬೆಟಗೇರಿಇವುಗಳ ಸಹಯೋಗದಲ್ಲಿ ವಿಜಯ ಕಲಾ ಮಂದಿರದ ಕಲಾ ಮಹರ್ಷಿ ಟಿ.ಪಿ ಅಕ್ಕಿ ಆರ್ಟಗ್ಯಾಲರಿಯಲ್ಲಿ ಹಮ್ಮಿಕೊಂಡ Àಮಕ್ಕಳ ಹಾಗೂ ಯುವ ಸಂಗೀತೋತ್ಸವ, ಶ್ರೀ ರಮೇಶ ಟಿ. ಅಕ್ಕಿ ಚಿನ್ನದ ಪದಕ ಪ್ರಶಸ್ತಿ ಹಾಗೂ ಸನ್ಮಾನ ಸಮಾರಂಭ ಉದ್ಘಾಟಿಸಿ ಮಾತನಾಡುತ್ತ ವಿಜಯ ಕಲಾ ಮಂದಿರ ಸಂಸ್ಥೆಯ ಟಿ.ಪಿ ಅಕ್ಕಿಯವರಆತ್ಮಿಯತೆ ಕಲಾ ಇಚ್ಚಾಶಕ್ತಿ ಕವಿ, ಕಲಾವಿದರು, ನಟರು, ಸಂಗೀತಗಾರರನ್ನು ಬೆಳಸಿದ ಕಲಾ ತಪೋ ಭೂಮಿ ಇಂತಹ ಪರಿಸರದಲ್ಲಿ ಮಕ್ಕಳಿಗೆ ಸಂಗೀತ ಶಿಕ್ಷಣ ಕಲಿತರೆ ಅವರಿಗೆ ಕಲಾ ವಿದ್ಯೆ ದೊರೆಯುತ್ತದೆ. ಅಕ್ಕಿಯವರ ಅಕ್ಕರೆಯ ಫಲವಾಗಿ ಹೆಸರಾಂತ ಕಲಾವಿದರು ಇಲ್ಲಿ ಬೆಳೆದಿದ್ದಾರೆ ಎಂದು ಮಾತನಾಡಿದರು.
ವಿಜಯ ಕಲಾ ಮಂದಿರ ಸಂಸ್ಥೆಯ ಅಂಗಳದಲ್ಲಿ ಹೆಜ್ಜೆ, ಗೆಜ್ಜೆ,ನಾದ ನಿನಾದಗಳ ಕಲರವ ಸೂಸುತಿತ್ತು ಅದರಂತೆ ಕಲಾ ಮಂದಿರದ ಅಂಗಳದಲ್ಲಿ ಇಂದು ಮಕ್ಕಳ ಸಂಗೀತ ಸಂಭ್ರಮವನ್ನುಇAದು ಸವಿಯುತ್ತ ಆನಂದ ತುಂದಿಲರಾಗಿದ್ದೇವೆ. ಅಂತಹ ಸಂಗೀತ ಪ್ರತಿಭೆಗಳಿಗೆ ಪಾಲಕರು ಪ್ರೋತ್ಸಾಹಿಸಬೇಕು ಮತ್ತು ಸಂಗೀತ ಕಲೆ ಎಂದು ಮರೆಯಾಗುವಂತಹದ್ದಲ್ಲ ಮಾನವನಜೀವನದುದ್ದಕ್ಕೂಅವಶ್ಯವಾಗಿರುವಂತದ್ದುಆದರೆ ಸಂಗೀತದ ಮೂಲಶಾಸ್ತರಿಯತೆ ಅಧ್ಯಯನಅವಶ್ಯವಾದ ಸಂಗತಿಯಾಗಿದೆ ಎಂದುಅಭಿಪ್ರಾಯಪಟ್ಟರು .
ವೇದಿಕೆಯ ಮೇಲೆ ರಾಘವೇಂದ್ರ ಹುಯಿಲಗೋಳಕರ, ವಸಂತ ಕುಲಕರ್ಣಿ ಶ್ರೀಮತಿ ಲಲಿತಾ ಬಾಳಿಹಳ್ಳಿಮಠ ರಾಘವೇಂದ್ರ ಪಾಠ ಶಾಲೆಯ ಶ್ರೀಕಾಂತ ಹೂಲಿ, ಶ್ರೀಮತಿ ವನಮಾಲ ಮಾನಶೆಟ್ಟಿ. ಉಪಸ್ಥಿತರಿದ್ದರು. ಸಂಸ್ಥೆಯ ಕಾರ್ಯದರ್ಶಿ ಪ್ರಕಾಶ ಅಕ್ಕಿ ಪ್ರಾಸ್ತಾವಿ ಮಾತುಗಳನ್ನಾಡಿದರು, ಶ್ರೀಮತಿ ಶ್ವೇತಕುಲಕರ್ಣಿ (ಸೊಂಡೂರ) ಡಾ ನಾಗಲಿಂಗ ಮುರಗಿ, ಕು ಪ್ರಸಾದ ಸುತಾರ, ಕು ಐಶ್ವರ್ಯ ಹೂಲಿಯವರಿಗೆ ಶ್ರೀ ರಮೇಶ ಟಿ. ಅಕ್ಕಿ ಬೆಳ್ಳಿ ಪದಕ ಪ್ರಶಸ್ತಿ ನೀಡಿಗೌರವಿಸಲಾಯಿತು
ಗುರುನಾಥ ಸುತಾರ, ವಾಸುದೇವ ಹೂಲಿ, ಶ್ರೀಮತಿ ವಿದ್ಯಾ ಮೊರಬ, ಆರ್‌ಎಲ್ ಪುರಾಣಿಕ್, ವೆಂಕಟೇಶ ಜೋಶಿ ಸಂಜಯ ತೆಂಬದಮನಿ ಯವರನ್ನು ಸನ್ಮಾನಿಸಲಾಯಿತು. ರಾಘವೇಂದ್ರ ಸಂಗೀತ ಪಾಠ ಶಾಲೆಯ ಮಕ್ಕಳು ,ಚೇತನ ಸಂಗೀತ ಪಾಠ ಶಾಲೆಯ ಮಕ್ಕಳು, ಅನರ್ಘ್ಯ ಸಂಗೀತ ಪಾಠ ಶಾಲೆಯ ವಿದ್ಯಾರ್ಥಿಗಳಿಂದ ಅದ್ದೂರಿ ಸಂಗೀತ ಕಾರ್ಯಕ್ರಮ ಜನಮನ ಸೆಳೆಯಿತು ಕಲಾವಿದ ಬಸವರಾಜ ನೆಲಜೇರಿ ನಿರೂಪಿಸಿ ವಂದಿಸಿದರು. ಚಿದಂಬರ ಪ್ರಾರ್ಥಿಸಿದರು. ಶ್ರೀಮತಿ ಶಿವಲೀಲಾ ಅಕ್ಕಿ, ರವಿ ಕೊಣ್ಣೂರ, ಶ್ರೀಮತಿ ಹೇಮಾವತಿ ಹೂಲಿ, ಮಹೇಶ ಕಾರ್ಯಕ್ರಮದ ಯಶಸ್ಸಿಗೆ ಶ್ರಮಿಸಿದರು.