ಮೂಲ್ಕಿ: ಪ್ರತಿಯೊಬ್ಬರಲ್ಲೂ ವಿಶಿಷ್ಟ ಪ್ರತಿಭೆ ಅಥವಾ ಕೌಶಲ ಇದ್ದು. ಈ ಸಾಮರ್ಥ್ಯ ಅನಾವರಣಗೊಳ್ಳಲು ಕಾಲೇಜಿನ ಕಾರ್ಯಕ್ರಮಗಳು ಸೂಕ್ತ ವೇದಿಕೆ ಒಸಗಿಸುತ್ತವೆ ಎಂದು ವಿಜಯ ಕಾಲೇಜಿನ ಹಳೇ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಅಶೋಕ್‌ಕುಮಾರ್ ಶೆಟ್ಟಿ ಹೇಳಿದರು.
ಮೂಲ್ಕಿ ವಿಜಯ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗಾಗಿ ಆಯೋಜಿಸಲಾಗಿದ್ದ ಕಲಾ ವೈಭವ ಪ್ರತಿಭಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಫಲಿತಾಂಶ: ಕಾಲೇಜಿನ ಅಭಿಜ್ಞಾ ಕಲಾ ತಂಡ ಚಾಂಪಿಯನ್ ಟ್ರೋಫಿ ಪಡೆದುಕೊಂಡಿತು. ಅಭನ್ಯ ಕಲಾ ತಂಡದವರು ರನ್ನರ್ ಅಪ್ ಸ್ಥಾನ ಪಡೆದರು. ಲತಿಫಾ ಪಲಕ್ ಹಾಗೂ ಮಷಿತ್ ಉತ್ತಮ ನಿರೂಪಣೆ ಪ್ರಶಸ್ತಿ ಪಡೆದರು.
ಪದವಿ ಕಾಲೇಜು ಪ್ರಾಂಶುಪಾಲ ಪ್ರೊ.ವೆಂಕಟೇಶ್ ಭಟ್ ಅಧ್ಯಕ್ಷತೆ ವಹಿಸಿದ್ದರು. ಪದವಿಪೂರ್ವ ಕಾಲೇಜು ಪ್ರಾಂಶುಪಾಲೆ ಪಮಿದ ಬೇಗಂ ಶುಭಹಾರೈಸಿದರು. ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಡಾ.ಶೈಲಜಾ ವೈ.ವಿ., ಆಂತರಿಕ ಗುಣಮಟ್ಟದ ಕೋಶಾಧಿಕಾರಿ ಪ್ರೊ.ದೇವದಾಸ್ ಕೆ., ಸಾಂಸ್ಕೃತಿಕ ಸಂಘದ ಸಂಯೋಜಕಿ ಡಾ.ದೀಪಿಕಾ ಮತ್ತು ಕಾರ್ಯದರ್ಶಿ ವೀಕ್ಷ ಉಪಸ್ಥಿತರಿದ್ದರು. ಹರ್ಷಿತಾ ಕಾರ್ಯಕ್ರಮ ನಿರೂಪಿಸಿದರು.