ವಿಜಯವಾಣಿ ಸುದ್ದಿಜಾಲ ಮೂಲ್ಕಿ
ವಿದ್ಯಾರ್ಥಿಗಳು ಸ್ಪಷ್ಟ ಗುರಿ ನಿರ್ಧರಿಸಿ ಅಧ್ಯಯನ ನಡೆಸಿದರೆ ಯಶಸ್ಸು ಕಾಣಲು ಸಾಧ್ಯ. ಕಾಲೇಜು ಜೀವನದಲ್ಲಿ ಮೌಲ್ಯಾಧಾರಿತ ಶಿಕ್ಷಣ ಪಡೆದು ಸಮಾಜಮುಖಿ ಹಾಗೂ ಉದ್ಯಮಶೀಲತಾ ಗುರಿ ಜತೆಗೆ ಬೆಳೆಯಬೇಕು ಎಂದು ಎಂ.ಆರ್.ಪಿ.ಎಲ್. ಕಾರ್ಯನಿರ್ವಾಹಕ ನಿರ್ದೇಶಕ ಬಿ.ಎಚ್.ವಾಸುದೇವ ಪ್ರಸಾದ್ ಹೇಳಿದರು.
ಮೂಲ್ಕಿ ವಿಜಯ ಕಾಲೇಜಿನ ವಾರ್ಷಿಕೋತ್ಸವದಲ್ಲಿ ಅವರು ಮಾತನಾಡಿದರು. ಅರ್ಥಶಾಸ್ತ್ರ ವಿಭಾಗ ಮುಖ್ಯಸ್ಥ ಎಂ.ಚೆನ್ನ ಪೂಜಾರಿ ಮಾರ್ಗದರ್ಶನದಲ್ಲಿ ಬಿ.ಸಿ.ಎ. ವಿದ್ಯಾರ್ಥಿಗಳು ಸಿದ್ಧಪಡಿಸಿದ ಪ್ರಾಜೆಕ್ಟನ್ನು ಮಣಿಪಾಲ ಅಕಾಡೆಮಿ ಆಫ್ ಜನರಲ್‌ಎಜುಕೇಶನ್‌ನ ಕಾರ್ಯದರ್ಶಿ ಬಿ.ಪಿ.ವರದರಾಯ ಪೈ ಬಿಡುಗಡೆಗೊಳಿಸಿದರು.
ವಯೋ ನಿವೃತ್ತಿಗೊಳ್ಳುತ್ತಿರುವ ನಿಟ್ಟಿನಲ್ಲಿ ಸಂಸ್ಥೆ ವತಿಯಿಂದ ಕಚೇರಿ ಅಧೀಕ್ಷಕ ರಾಮಚಂದ್ರ ಉಡುಪ, ಸಿಬ್ಬಂದಿ ಸಮಿತ ಮತ್ತು ಶಶಿಧರ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು. ಆಡಳಿತ ಮಂಡಳಿ ಅಧ್ಯಕ್ಷ ಸುಹಾಸ್ ಹೆಗ್ಡೆ ಅಧ್ಯಕ್ಷತೆ ವಹಿಸಿದ್ದರು. ಆಡಳಿತ ಮಂಡಳಿ ವಿಶ್ವಸ್ಥ ಶಿವರಾಮ ಕಾಮತ್, ಸದಸ್ಯರಾದ ಸ್ಯಾಮ್ ಮಾಬೆನ್, ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷೆ ಪ್ರತಿಭಾ ಶೆಟ್ಟಿ, ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ಪಮೀದಾ ಬೇಗಂ, ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಡಾ.ಶೈಲಜಾ ವೈ.ವಿ, ಹಿರಿಯ ಉಪನ್ಯಾಸಕಿ ಶರ್ಮಿಳಾ ರಾಜೇಶ್ ಉಪಸ್ಥಿತರಿದ್ದರು.
ಪ್ರಾಂಶುಪಾಲೆ ಡಾ.ಶ್ರೀಮಣಿ ಶೆಟ್ಟಿ ವಾರ್ಷಿಕ ಶೈಕ್ಷಣಿಕ ವರದಿ ವಾಚಿಸಿದರು. ಎನ್‌ಸಿಸಿ ಅಧಿಕಾರಿ ರಾಜೇಶ್ ಶೆಟ್ಟಿಗಾರ್ ಬಹುಮಾನ ವಿಜೇತರ ಪಟ್ಟಿ ವಾಚಿಸಿದರು. ಸಿಂಚನ ಪ್ರಾರ್ಥಿಸಿದರು. ಐಕ್ಯೂಎಸಿ ಸಂಯೋಜಕ ಎಂ.ಚೆನ್ನ ಪೂಜಾರಿ ಸ್ವಾಗತಿಸಿದರು. ಭೌತಶಾಸ್ತ್ರ ವಿಭಾಗ ಮುಖ್ಯಸ್ಥ ವೆಂಕಟೇಶ್ ಭಟ್ ವಂದಿಸಿದರು.