ಸರಗೂರು: ರತ್ನಾಕರ ವಾಲ್ಮೀಕಿ ನಾಯಕರ ಯುವ ವೇದಿಕೆಯ ಸರಗೂರು ತಾಲೂಕು ಅಧ್ಯಕ್ಷರಾಗಿ ವಿಜಯಪ್ರಕಾಶ್ ನಾಯಕ ಆಯ್ಕೆಯಾಗಿದ್ದಾರೆ.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಭಾನುವಾರ ನಡೆದ ಸಭೆಯಲ್ಲಿ ಆಯ್ಕೆ ಮಾಡಲಾಗಿದೆ. ಗೌರವಾಧ್ಯಕ್ಷರಾಗಿ ಎಚ್. ಮಟಕೆರೆ ವೀರಭದ್ರನಾಯಕ, ಉಪಾಧ್ಯಕ್ಷರಾಗಿ ಸದಾಶಿವ ಇಟ್ನಾ, ಕಾರ್ಯದರ್ಶಿಯಾಗಿ ಆಗತ್ತೂರು ಚಲುವನಾಯಕ, ಖಜಾಂಚಿಯಾಗಿ ಬಸಾಪುರ ರವಿಕುಮಾರ, ಪತ್ರಿಕಾ ಪ್ರತಿನಿಧಿಯಾಗಿ ಸರಗೂರು ರವಿಕುಮಾರ್, ನಿರ್ದೇಶಕರಾಗಿ ಬಸವರಾಜು ಎಚ್.ಮಟಕೆರೆ, ಸೋಗಹಳ್ಳಿ ಸೋಮಶನಾಯಕ, ಹೆಬ್ಬಲಗುಪ್ಪೆ ರಾಜು ಕೋಳಿ, ಮುಳ್ಳೂರು ಗೋವಿಂದನಾಯಕ, ತುಂಬಸೋಗೆ ಚಂದ್ರ, ಸದಸ್ಯರಾಗಿ ಬಸಪ್ಪ ಸೋಗಹಳ್ಳಿ, ನವೀನ್ ಕುಮಾರ್ ಸರಗೂರು, ವೇಣುಗೋಪಾಲ್ ಬಿ.ಡಿ.ಮುಂಟಿ, ಸಣ್ಣಸ್ವಾಮಿ ನಾಯಕ, ವೆಂಕಟಾಚಲ, ನಿಲುವಾಗಿಲು, ಸ್ವಾಮಿ ಅಂಕನಾಥಪುರ, ನಿಂಗರಾಜು, ಜವರಾಜು ಆಗತ್ತೂರು ಆಯ್ಕೆಯಾಗಿದ್ದಾರೆ.