ಚಿತ್ರದುರ್ಗ:ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವ ಮತ್ತು ಜೀವನ ಮೌಲ್ಯಬೆಳೆಸ ಬೇಕೆಂದು ಡಯಟ್ ಪ್ರಾಚಾರ‌್ಯ ಎಸ್.ಕೆ.ಬಿ.ಪ್ರಸಾದ್ ಹೇಳಿ ದರು. ನಗರದ ಡಯಟ್‌ನಲ್ಲಿ ಶಿಕ್ಷಣ ಇಲಾಖೆ ಹಾಗೂ ಡಯಟ್ ಸಂಯುಕ್ತಾಶ್ರಯದಲ್ಲಿ ಜಿಲ್ಲೆಯ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಸೋಮವಾರ ಆಯೋಜಿಸಿದ್ದ ಜಿಲ್ಲಾಮಟ್ಟದ ವಿಜ್ಞಾನ ವಿಚಾರ ಗೋಷ್ಠಿ,ವಿಜ್ಞಾನ ನಾಟಕ ಸ್ಪರ್ಧೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ವಿದ್ಯಾರ್ಥಿಗಳು ಸ್ಪರ್ಧಾ ಮನೋಭಾವನೆ ಬೆಳೆಸಿ ಕೊಳ್ಳಬೇಕು. ಸ್ಪರ್ಧೆಯಲ್ಲಿ ಭಾಗವಹಿಸುವಿಕೆ ಮುಖ್ಯವಾಗಿದ್ದು ಶ್ರದ್ಧೆ,ಕಠಿಣ ಪರಿ ಶ್ರಮದಿಂದ ಯಶಸ್ಸು ಪಡೆಯಲು ಸಾಧ್ಯವಾಗುತ್ತದೆ. ಸಹಪಠ್ಯ ಚಟುವಟಿಕೆಗಳಲ್ಲಿ ಭಾಗವಹಿಸುವುದರಿಂದ ಮಾತುಗಾರಿಕೆ,ಅಭಿನಯ ಕೌಶಲ್ಯಬೆಳೆಯುತ್ತದೆ.
ಆಲಿಸುವ ಸಾಮರ್ಥ್ಯ ಹೆಚ್ಚಳ ಭಾಷಾ ಸಾಮರ್ಥ್ಯವನ್ನೂ ಹೆಚ್ಚಿಸುತ್ತದೆ. ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗ ವಹಿಸುದರ ಜತೆಗೆ ವೈಜ್ಞಾನಿಕ ಸಂಶೋಧನೆ ಅಂಶಗಳನ್ನು ಸಮಾಜದ ಅಭಿವೃದ್ಧಿಗೆ ಪೂರಕವಾಗಿ ಬಳಸಿಕೊಳ್ಳಬೇಕು ಎಂದರು.
ನೋಡಲ್ ಅಧಿಕಾರಿ ಬಿ.ಎಸ್.ನಿತ್ಯಾನಂದ ಮಾತನಾಡಿ,ವೈಜ್ಞಾನಿಕ ವಿಚಾರಗಳೆಡೆ ವಿದ್ಯಾರ್ಥಿಗಳನ್ನು ಪ್ರೇರೆಪಿಸಲು ಇಂಥ ಸ್ಪರ್ಧೆಗಳು ಸಹಕಾರಿಯಾಗುತ್ತವೆ. ಶಿಕ್ಷಕರು ಅನ್ವೇಷಣಾ ಜಾಗೃತಿ,ವಿಶ್ಲೇಷಣಾ ಸಾಮರ್ಥ್ಯ,ಹೊಸ ಆವಿಷ್ಕಾರಗಳ ಕುರಿತು ವಿದ್ಯಾರ್ಥಿಗಳಿಗೆ ಮಾರ್ಗ ದರ್ಶನ ಮಾಡಬೇಕು ಎಂದರು.
ಉಪನ್ಯಾಸಕರಾದ ಆರ್.ನಾಗರಾಜು,ಕೆ.ಜಿ.ಪ್ರಶಾಂತ್,ಎಸ್.ಬಸವರಾಜು,ವಿ.ಕನಕಮ್ಮ, ಕೆ.ಎಂ.ನಾಗರಾಜು, ತೀರ್ಪುಗಾರರಾದ ದಾಸೇಗೌಡ,ಚಂದ್ರಾರೆಡ್ಡಿ,ಡಾ.ಮಹೇಶ್,ರಾಜಶೇಖರ್,ಶಿಕ್ಷಕಿ ರಶ್ಮಿ,ತಾಂತ್ರಿಕ ಸಹಾಯಕರಾದ ಕೆ.ಆರ್.ಲೋಕೇಶ್,ಆರ್.ಲಿಂಗರಾಜು ಮತ್ತಿತರರು ಇದ್ದರು.