ಜಿಲ್ಲೆ

ವಿದ್ಯುತ್​ ತಗುಲಿ ಎಸ್ಸೆಸ್ಸೆಲ್ಸಿ ವಿದ್ಯಾಥಿರ್ ಸಾವು

ಬ್ಯಾಡಗಿ: ಮನೆಗೆ ಕರೆಂಟ್​ ಬಾರದ ಕಾರಣ ಲೈನ್​ ದುರಸ್ತಿ ಪಡಿಸಲು ಹೋದ ಎಸ್ಸೆಸ್ಸೆಲ್ಸಿ ವಿದ್ಯಾಥಿರ್ಯೊಬ್ಬ ವಿದ್ಯುತ್​ ತಗುಲಿ ಮೃತಪಟ್ಟ ಘಟನೆ ತಾಲೂಕಿನ ಮೋಟೆಬೆನ್ನೂರ ಗ್ರಾಮದಲ್ಲಿ ಸೋಮವಾರ ನಡೆದಿದೆ.
ಲೋಹಿತ್​ ಮಂಜಪ್ಪ ಬಟ್ಟಲಕಟ್ಟಿ (15) ಮೃತ ವಿದ್ಯಾಥಿರ್.
ಈತ ಮನೆಯಲ್ಲಿ ಕರೆಂಟ್​ ಬಾರದ ಕಾರಣ ಮನೆ ಮುಂಭಾಗದ ವಿದ್ಯುತ್​ ಕಂಬಕ್ಕೆ ಹಾಕಿದ್ದ ಲೈನ್​ಅನ್ನು ಪರಿಶೀಲಿಸಲು ಹೋದಾಗ ಆಕಸ್ಮಿಕವಾಗಿ ವಿದ್ಯುತ್​ ತಗುಲಿ ಮೃತಪಟ್ಟಿದ್ದಾನೆ ಎನ್ನಲಾಗಿದೆ. ಈ ಕುರಿತು ಬ್ಯಾಡಗಿ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.