ಉಡುಪಿ: ಪಿ.ಯು.ಸಿ ಶಿಕ್ಷಣ ಅತೀ ಮಹತ್ವದ್ದಾಗಿದೆ. ಕೇವಲ ಬಾಹ್ಯ ತೋರಿಕೆಯ ವಿಚಾರಗಳಿಗೆ ಮಹತ್ವ ಕೊಡದೆ ಆಂತರಿಕ ಸೌಂದರ್ಯವನ್ನು ಗಟ್ಟಿಗೊಳಿಸುವಲ್ಲಿ ಶ್ರಮವಹಿಸಬೇಕು ಎಂದು ಕಾರ್ಕಳ ಎಂ.ವಿ. ಶಾಸ್ತ್ರಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ರಾಜೇಂದ್ರ ಭಟ್ ಹೇಳಿದರು.
ಸೋಮವಾರ ವಿದ್ಯೋದಯ ಟ್ರಸ್ಟ್ ಅಂಗ ಸಂಸ್ಥೆ ವಿದ್ಯೋದಯ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಾರಂಭೋತ್ಸವ ಉದ್ಘಾಟಿಸಿ ಮಾತನಾಡಿದರು.
ಕಾಲೇಜು ಆಡಳಿತ ಮಂಡಳಿಯ ಅಧ್ಯಕ್ಷ ಎನ್. ನಾಗರಾಜ ಬಲ್ಲಾಳ್ ಅಧ್ಯಕ್ಷತೆ ವಹಿಸಿದ್ದರು. ಕೋಶಾಧ್ಯಕ್ಷ ಯು. ಪದ್ಮರಾಜ್ ಆಚಾರ್ಯ ಉಪಸ್ಥಿತರಿದ್ದರು. ಪ್ರಾಂಶುಪಾಲ ಸಂದೀಪ್ ಕುಮಾರ್ ಅವಲೋಕನಗೈದರು. ಉಪಪ್ರಾಂಶುಪಾಲ ರಂಜನಾ ಕೆ. ಸ್ವಾಗತಿಸಿದರು. ಉಪನ್ಯಾಸಕ ಶಕುಂತಲಾ ಆರ್. ಪಾಲನ್, ಸಂದೀಪ್ ಶೆಣೈ, ಉಷಾ ವಿದ್ಯಾರ್ಥಿಗಳಿಗೆ ಅಗತ್ಯ ಮಾರ್ಗದರ್ಶನ ನೀಡಿದರು. ಉಪನ್ಯಾಸಕಿ ಸಪ್ನಾ ರಾಜೇಶ್ ಅತಿಥಿಗಳನ್ನು ಪರಿಚಯಿಸಿದರು. ಸೌಮ್ಯಾ ಕಜೆಕಾರ್ ವಂದಿಸಿ, ಶಿವಪ್ರಸಾದ ಭಟ್ ನಿರ್ವಹಿಸಿದರು.