ನುಗ್ಗೇಹಳ್ಳಿ: ಸಮೀಪದ ಗುಂಗುರ ಮಳೆ ಗ್ರಾಮ ಪಂಚಾಯಿತಿ ಅಧ್ಯಕ್ಷೆಯಾಗಿ ವಿದ್ಯಾ ಸಂಪತ್ ಗುರುವಾರ ಅವಿರೋಧ ಆಯ್ಕೆಯಾದರು. ಪೂಜಾ ಅಶೋಕ್ ಅವರ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ಚುನಾವಣೆ ಪ್ರಕ್ರಿಯೆ ನಡೆಯಿತು. ಅಧ್ಯಕ್ಷ ಸ್ಥಾನಕ್ಕೆ ವಿದ್ಯಾ ಸಂಪತ್ತು ಒಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಚುನಾವಣಾ ಅಧಿಕಾರಿ ಪವನ್ ಕುಮಾರ್ ಅವಿರೋಧ ಆಯ್ಕೆ ಪ್ರಕಟಿಸಿದರು.
ಪಿಡಿಒ ಉಮಾ ಮಹೇಶ್ ಮುಖಂಡರಾದ ತೋಟಿ ನಾಗರಾಜ್, ರಾಕೇಶ್, ಸುರೇಶ್ ಗೌಡ, ಟಿ.ಪಿ.ಮಂಜು, ಮಹೇಶ್, ಸುಧಾ, ನಂಜುಂಡಿ, ವೇಣು, ಸದಸ್ಯರಾದ ಪೂಜಾ, ಶೀಲಾ, ವಿದ್ಯಾ, ರಾಜಲಕ್ಷ್ಮೀ, ವೆಂಕಟೇಶ್, ಗಂಗಾಧರ್, ಶಿವಕುಮಾರ್, ಪುಷ್ಪಾ, ಜಯಮ್ಮ, ಸುಜಾತಾ ಇತರರು ಹಾಜರಿದ್ದರು.