ಪುತ್ತೂರು: ಪೂರ್ವಜರ ಜೀವನ ಶೈಲಿಯನ್ನು ನೆನಪಿಸಿಕೊಂಡು ಮಣ್ಣಿನಲ್ಲಿರುವ ಉತ್ತಮ ಗುಣಗಳು ಹೇಗೆ ನಮ್ಮ ಆರೋಗ್ಯವನ್ನು ವೃದ್ಧಿಸುವಲ್ಲಿ ಸಹಾಯಕವಾಗುತ್ತದೆ ಎಂದು ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕ ಕೆ ಸೀತಾರಾಮ ರೈ ಸವಣೂರು ಹೇಳಿದರು.
ಅವರು ಮಂಗಳವಾರ ಕನ್ನಡ ಕುಮೇರು ವಿನಲ್ಲಿ ವಿದ್ಯಾರಶ್ಮಿ ಪ್ರಥಮದರ್ಜೆಕಾಲೇಜಿನದೈಹಿಕ ಶಿಕ್ಷಣ ವಿಭಾಗ ಆಯೋಜಿಸಿದ ಕೆಸರುಗದ್ದೆ ಪಂದ್ಯಾಟ ಉದ್ಘಾಟಿಸಿ ಮಾತನಾಡಿದರು.
ಸವಣೂರು ಯುವಕ ಮಂಡಲದ ಅಧ್ಯಕ್ಷ ಜೀತಾಕ್ಷ ಜಿ. ಕ್ರೀಡಾಪಟುಗಳಿಗೆ ಶುಭವನ್ನು ಹಾರೈಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತಾಧಿಕಾರಿ ಅಶ್ವಿನ್ ಎಲ್ ಶೆಟ್ಟಿ ವಹಿಸಿದ್ದರು.
ವಿದ್ಯಾರಶ್ಮಿ ಪ್ರಥಮದರ್ಜೆಕಾಲೇಜಿನ ಪ್ರಾಂಶುಪಾಲರಾದಡಾ.ನಾರಾಯಣ ಮೂರ್ತಿ ಕೆ ಉಪಪ್ರಾಂಶುಪಾಲರಾದ ಶ್ರೀಯುತ.ಶೇಷಗಿರಿ ಎಂ ಹಾಗೂ ಪದ್ಮಾವತಿ ಮಜಲು ಉಪಸ್ಥಿತರಿದ್ದರು.
ತೃತೀಯ ಬಿ.ಎ ವಿದ್ಯಾರ್ಥಿಯಾದ ಶಮೀರ್ ಸ್ವಾಗತಿಸಿ, ವಂದಿಸಿದರು. ತೃತೀಯ ಬಿ.ಕಾಂ ವಿದ್ಯಾರ್ಥಿನಿಯಾದ ಸ್ವಸ್ಥಿ ರೈ ಜಿ. ಕಾರ್ಯಕ್ರಮ ನಿರ್ವಹಿಸಿದರು.