ಉಡುಪಿ: ಚಿಕ್ಕ ವಯಸ್ಸಿನಲ್ಲಿಯೇ ತಂದೆಯನ್ನು ಕಳೆದುಕೊಂಡು, ಗೇರು ಬೀಜ ಕಾರ್ಖಾನೆಯಲ್ಲಿ ದಿನಗೂಲಿ ಕೆಲಸ ಮಾಡುತ್ತಿರುವ ತಾಯಿಯ ಶ್ರಮಕ್ಕೆ ಬೆಲೆ ನೀಡಿರುವ ಮಂದಾರ್ತಿ ಶ್ರೀ ದುರ್ಗ ಪರಮೇಶ್ವರಿ ಟೆಂಪಲ್ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿನಿ ಮಾನ್ಯ ಎಸ್. ಪೂಜಾರಿ ದ್ವೀತಿಯ ಪಿಯುಸಿ ಪರೀೆಯಲ್ಲಿ 571 (ಶೇ.95.1) ಅಂಕ ಗಳಿಸಿದ್ದಾರೆ.
ಕುಂದಾಪುರ ಸಣ್ಣ ಹಳ್ಳಿ ಹೆಸಕುತ್ತೂರಿಂದ 25 ಕಿಮೀ ದೂರದ ಶಾಲೆಗೆ 2 ಬಸ್ ಬದಲಾಯಿಸಿಕೊಂಡ ನಿತ್ಯ ಪ್ರಯಾಣ. ತಾಯಿ ವಿನೋದಾ ಅವರು ತಮ್ಮ ಇಬ್ಬರು ಹೆಣ್ಣು ಮಕ್ಕಳನ್ನು ಕಷ್ಟಪಟ್ಟು ಓದಿಸುತ್ತಿದ್ದಾರೆ. ಸದ್ಯ ಮಾನ್ಯ ದ್ವೀತಿಯ ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ.
ಯಕ್ಷಗಾನ ಕಲಾರಂಗದ ವಿದ್ಯಾಪೋಷಕ್ ವಿದ್ಯಾರ್ಥಿನಿಯಾಗಿದ್ದು, ಮುಂದಿನ ದಿನಗಳಲ್ಲಿ ಬಿಕಾಂ ಪದವಿ ಜೊತೆಗೆ ಸಿಎ ಪರೀೆ ಬರೆಯುವ ಆಸೆಯಿದೆ. ಯಾವುದೇ ಟ್ಯೂಷನ್ಗೆ ಹೋಗದೇ ಕಾಲೇಜು ಪ್ರಾಧ್ಯಾಪಕರ ಸಹಾಯ ಪಡೆದು, ಶ್ರಮವಹಿಸಿ ಓದಿದ್ದೇನೆ. ಉತ್ತಮ ಅಂಕ ಲಭಿಸಿದೆ. -ಮಾನ್ಯ ಪೂಜಾರಿ, ವಿದ್ಯಾರ್ಥಿನಿ