ಹುಬ್ಬಳ್ಳಿ: ಕಳೆದ ಸೆಪ್ಟೆಂಬರ್ನಲ್ಲಿ ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್ಸಿ) ನಡೆಸಿದ ನ್ಯಾಷನಲ್ ಡಿಫೆನ್ಸ್ ಅಕಾಡೆಮಿ ಮತ್ತು ನೇವಲ್ ಅಕಾಡೆಮಿಯ ಲಿಖಿತ ಪರೀಕ್ಷೆಯಲ್ಲಿ ಇಲ್ಲಿಯ ಚೌಗಲಾ ಶಿಕ್ಷಣ ಸಂಸ್ಥೆಯ ವಿದ್ಯಾನಿಕೇತನ ಪದವಿ ಪೂರ್ವ ವಿಜ್ಞಾನ ಮಹಾವಿದ್ಯಾಲಯದ 21 ವಿದ್ಯಾರ್ಥಿಗಳು ಉತ್ತೀರ್ಣರಾಗಿ, ಅಂತಿಮ ಸಂದರ್ಶನಕ್ಕೆ ಆಯ್ಕೆಯಾಗಿದ್ದಾರೆ.
ಕೆ. ಪ್ರಜ್ವಲ್, ಆಕ್ರಶ್ ಎಸ್. ತರಲಗಟ್ಟಿ, ರೋಹನ ಸಾರ್ವಿ, ಅನುಷಾ ಬಂಡಿವಾಡ, ಗಣೇಶ ಬಿಸಗುಪ್ಪಿ, ಅಮಿತ ನೀಲಗುಂದ, ದರ್ಶನ ನೀರಲಗಿ, ಕೇದಾರವಿಷ್ಣು ಎಸ್.ಟಿ., ನಿಖಿಲ್ ಶೀಲವಂತರ, ಪ್ರೀತಮ ವಡ್ಡರ, ಕೃಷ್ಣಾ, ಪ್ರೀತಂ ಕಾಂಬಳೆ, ಅಭಿಷೇಕ ತಕ್ಕಲಕಿ, ಅಮೃತಾ ಉಮಚಗಿ, ದೃಶ್ಯ ಬಿರಾದಾರ, ನಂದೀಶ ದ್ಯಾಮಣ್ಣವರ, ಪಾರ್ಥ ಪಾಟೀಲ, ಪ್ರದೀಪ ಕುರ್ತಕೋಟಿ, ಶ್ರೀನಿವಾಸ ದೇಶಪಾಂಡೆ, ಸ್ಥವನ್ ಇನಾಮದಾರ, ಸ್ವರೂಪ ಪಾಟೀಲ ತೇರ್ಗಡೆಗೊಂಡ ವಿದ್ಯಾರ್ಥಿಗಳಾಗಿದ್ದಾರೆ.
ವಿದ್ಯಾರ್ಥಿಗಳ ಸಾಧನೆಗೆ ಮಹಾವಿದ್ಯಾಲಯದ ಆಡಳಿತ ಮಂಡಳಿ ಹಾಗೂ ಸಿಬ್ಬಂದಿ ಹರ್ಷ ವ್ಯಕ್ತಪಡಿಸಿದ್ದಾರೆ.