ಜಿಲ್ಲೆ

ಡಿ.2 ರಂದು ವಿದ್ಯಾದಾಯಿನೀ ಪ್ರೌಢ ಶಾಲಾ ವಾರ್ಷಿಕೋತ್ಸವ

Mangaluru - Shravan Kumar Nala

ಮಂಗಳೂರು: ಹಿಂದು ವಿದ್ಯಾದಾಯಿನೀ ಸಂಘದ ಆಡಳಿತಕ್ಕೊಳಪಟ್ಟ ಸುರತ್ಕಲ್ ಅನುದಾನಿತ ವಿದ್ಯಾದಾಯಿನೀ ಪ್ರೌಢ ಶಾಲೆಯ ಶಾಲಾ ವಾರ್ಷಿಕೋತ್ಸವವು ಡಿ.2 ರಂದು ವಿದ್ಯಾದಾಯಿನೀ ಪ್ರೌಢ ಶಾಲೆಯ ವಜ್ರ ಮಹೋತ್ಸವ ಸಭಾಂಗಣದಲ್ಲಿ ಜರಗಲಿದೆ. ಅಂದು ಬೆಳಗ್ಗೆ ಧ್ವಜವಂದನೆ ಮತ್ತು ಬಹುಮಾನ ವಿತರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಸಾಮಾಜಿಕ ಮುಂದಾಳು ಬಿ ಪ್ರಕಾಶ್ ಪೈ, ವಿಜಯಲಕ್ಷ್ಮೀ ಪೈ. ಹಾಗೂ ಮಧ್ಯಾಹ್ನದ ಸಭಾ ಕಾರ್ಯಕ್ರಮದಲ್ಲಿ ಅಧ್ಯಕ್ಷ ಸಂಘದ ಅಧ್ಯಕ್ಷ ಎಚ್. ಜಯಚಂದ್ರ ಹತ್ವಾರ್ ಹಾಗೂ ಮುಖ್ಯ ಅತಿಥಿಗಳಾಗಿ ಎನ್.ಐ.ಟಿ.ಕೆ ಸುರತ್ಕಲ್ ಇಲ್ಲಿನ ಡೀನ್, ಅಲ್ಯೂಮಿನಿ ಅಂಡ್ ಕಾರ್ಪೊರೇಟ್ ರಿಲೇಷನ್ಸ್ ಆದ ಪ್ರೊ.ಕಾಂತ್ ಎಸ್ ರಾವ್ ಉಪಸ್ಥಿತರಿರುವರು. ಸ್ವಸ್ತಿವಾಚನವನ್ನು ಶಾಲಾ ಹಳೆ ವಿದ್ಯಾರ್ಥಿನಿ ಪುಷ್ಪಲತಾ ಕೆ. ಇವರುಗಳು ಕಾರ್ಯಕ್ರಮವನ್ನು ನೆರವೇರಿಸುವರು. ನಂತರ ಶಾಲಾ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ ಎಂದು ಶಾಲಾ ಸಂಚಾಲಕ ಸುಧಾಕರ ರಾವ್ ಪೇಜಾವರ ಮತ್ತು ಶಾಲಾ ಮುಖ್ಯೋಪಾಧ್ಯಾಯ ಬಾಲಚಂದ್ರ ಕೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.