ಕಂಪ್ಲಿಯ ವೆಂಕಟರಮಣ ದೇವಸ್ಥಾನದಲ್ಲಿ ವಿದ್ಯಾಭಾರತಿ ಶ್ರೀಗಳು ಚಾತುರ್ಮಾಸ್ಯ ವ್ರತ ಆರಂಭಿಸಿದರು. 
ಜಿಲ್ಲೆ

ವಿದ್ಯಾಭಾರತಿ ಶ್ರೀಗಳಿಂದ ಚಾತುರ್ಮಾಸ್ಯ ವ್ರತ

ಕಂಪ್ಲಿ: ಇಲ್ಲಿನ ಸತ್ಯನಾರಾಯಣಪೇಟೆಯ ವೆಂಕಟರಮಣ ದೇವಸ್ಥಾನದಲ್ಲಿ ಚಾತುರ್ಮಾಸ್ಯ ನಿಮಿತ್ತ ಶ್ರೀಮನ್ನಾರಾಯಣಾಶ್ರಮದ ಪರಮಹಂಸ ನಾರಾಯಣ ವಿದ್ಯಾಭಾರತಿ ಶ್ರೀಗಳು ಎರಡು ತಿಂಗಳ ಅನುಷ್ಠಾನವ್ರತ ಭಾನುವಾರ ಆರಂಭಿಸಿದರು.

ಕೃಷ್ಣಪಂಚಕ, ವ್ಯಾಸಪಂಚಕ, ಶಂಕರಪಂಚಕ ಸೇರಿ 45 ದೇವತೆಗಳ ಪೂಜೆ ಶಾಸ್ತ್ರೋಕ್ತವಾಗಿ ನೆರವೇರಿತು. ಲಕ್ಷ್ಮೀ ವೆಂಕಟರಮಣಗೆ ಪಂಚಾಮೃತಾಭಿಷೇಕ, ಕುಂಭಾಭಿಷೇಕ, ಯಥಾಶಕ್ತಿ ಅನ್ನಸಂತರ್ಪಣೆ ಮೊದಲಾದ ಅಧ್ಯಾತ್ಮ, ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು.

ಸೇವಾ ಧರ್ಮದರ್ಶಿಗಳಾದ ವೈಷ್ಣವಿ ಕೃಷ್ಣಮೂರ್ತಿ, ಲಲಿತಾರಾಣಿ ಗಿರೀಶ್, ರೂಪಾ ಗುರುಪ್ರಸಾದ್, ಸವಿತಾ ಶಶಿಧರ್, ಭಗವತಿ, ಅಶ್ವತ್ಥನಾರಾಯಣ ಇತರರಿದ್ದರು.