ಜಿಲ್ಲೆ

ಶಿಕ್ಷಣಕ್ಕೆ ವಿದ್ಯಾವಾಹಿನಿ ಸಾಥ್: ಬುಡಕಟ್ಟು ಸಮುದಾಯಕ್ಕೆ ವರದಾನ : 3129 ಮಕ್ಕಳಿಗೆ ಸೌಲಭ್ಯ

ಸೌಮ್ಯ ಆರ್

ವಿಜಯವಾಣಿ ಸುದ್ದಿಜಾಲ ಮುಳ್ಳೇರಿಯ

ಕಾಸರಗೋಡು ಬುಡಕಟ್ಟು ಅಭಿವೃದ್ಧಿ ಕಚೇರಿಯಡಿಯಲ್ಲಿರುವ 36 ಶಾಲೆಗಳಲ್ಲಿ 1179 ವಿದ್ಯಾರ್ಥಿಗಳು ಮತ್ತು ಪರಪ್ಪ ಬುಡಕಟ್ಟು ಅಭಿವೃದ್ಧಿ ಕಚೇರಿಯಡಿಯಲ್ಲಿರುವ 31 ಶಾಲೆಗಳಲ್ಲಿ 1950 ವಿದ್ಯಾರ್ಥಿಗಳು ಸೇರಿ ಜಿಲ್ಲೆಯಲ್ಲಿ ಒಟ್ಟು 3129 ವಿದ್ಯಾರ್ಥಿಗಳು ವಿದ್ಯಾವಾಹಿನಿಯ ಫಲಾನುಭವಿಗಳಾಗಿದ್ದಾರೆ.

ಈ ಯೋಜನೆಯನ್ನು ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ಇಲಾಖೆ 2013-14ರಲ್ಲಿ ‘ಗೋತ್ರ ಸಾರಥಿ’ ಎಂಬ ಹೆಸರಿನಲ್ಲಿ ಪ್ರಾರಂಭಿಸಿತು ಮತ್ತು ನಂತರ ಇದನ್ನು ‘ವಿದ್ಯಾವಾಹಿನಿ’ ಎಂದು ಮರುನಾಮಕರಣ ಮಾಡಲಾಯಿತು. ಈ ಯೋಜನೆಯು ಏಕಕಾಲದಲ್ಲಿ ಒಂದಕ್ಕಿಂತ ಹೆಚ್ಚು ಪರಿಶಿಷ್ಟ ಪಂಗಡಗಳಿಗೆ ಸೇರಿದ ಫಲಾನುಭವಿಗಳಿಗೆ ಅವಕಾಶಗಳನ್ನು ಒದಗಿಸುತ್ತಿದೆ. ವಿದ್ಯಾರ್ಥಿಗಳನ್ನು ಶಾಲೆಗೆ ಉಚಿತವಾಗಿ ಕರೆದೊಯ್ಯುವ ಮತ್ತು ಹಿಂತಿರುಗಿಸುವ ಈ ಯೋಜನೆಯು ಮಕ್ಕಳಿಗೆ ಶಿಕ್ಷಣ ನೀಡುವುದಲ್ಲದೇ, ಚಾಲಕರಿಗೆ ಉದ್ಯೋಗವನ್ನೂ ಸೃಷ್ಟಿಸುತ್ತದೆ. ಪರಿಶಿಷ್ಟ ಪಂಗಡಗಳಿಂದ ಚಾಲಕರು ಇಲ್ಲದಿದ್ದರೆ, ಅವರನ್ನು ಸಾಮಾನ್ಯವರ್ಗದಿಂದ ಆಯ್ಕೆ ಮಾಡಲಾಗುತ್ತದೆ.

ತಿಂಗಳಿಗೆ ಮೂರು ಲಕ್ಷ ರೂ. ಖರ್ಚು

ಸಾರ್ವಜನಿಕ ಸಾರಿಗೆ ಸೌಲಭ್ಯವಿಲ್ಲದ ಮತ್ತು ಅರಣ್ಯ ಪ್ರದೇಶಗಳಿಂದ ಬರುವ 1ರಿಂದ 10ನೇ ತರಗತಿಯ ವಿದ್ಯಾರ್ಥಿಗಳು ವಿದ್ಯಾವಾಹಿನಿಯ ಪ್ರಯೋಜನ ಪಡೆಯುತ್ತಿದ್ದಾರೆ. ಕಿರಿಯ ಮತ್ತು ಹಿರಿಯ ಪ್ರಾಥಮಿಕ ತರಗತಿಗಳಿಗೆ ಒಂದು ಕಿಲೋಮೀಟರ್ ದೂರದಲ್ಲಿರುವ ಹತ್ತಿರದ ಸಾರ್ವಜನಿಕ ಶಾಲೆಗೆ ಮತ್ತು ಪ್ರೌಢಶಾಲಾ ವರ್ಗಕ್ಕೆ ಕನಿಷ್ಠ ಎರಡು ಕಿಲೋಮೀಟರ್ ದೂರದಲ್ಲಿರುವ ಪ್ರೌಢಶಾಲೆಗೆ ವಿದ್ಯಾ ವಾಹಿನಿಯ ಸೇವೆ ಲಭ್ಯವಿರುತ್ತದೆ. ಬಂದಡ್ಕ ಶಾಲೆಯಲ್ಲಿ ವಾಹನಗಳ ಬಾಡಿಗೆಗೆ ಇಲಾಖೆಯು ತಿಂಗಳಿಗೆ ಸುಮಾರು ಮೂರು ಲಕ್ಷ ರೂ.ಗಳನ್ನು ಖರ್ಚು ಮಾಡುತ್ತಿದೆ ಎಂದು ಕಾಸರಗೋಡು ಬುಡಕಟ್ಟು ವಿಸ್ತರಣಾಧಿಕಾರಿ ವೀರೇಂದ್ರ ಕುಮಾರ್ ಹೇಳಿದ್ದಾರೆ.

ನಮ್ಮ ಕಾಲದಲ್ಲೂ ಇಂತಹ ವ್ಯವಸ್ಥೆಗಳು ಜಾರಿಯಲ್ಲಿದ್ದಿದ್ದರೆ, ಹೆಚ್ಚಿನ ಮಕ್ಕಳು ಶಾಲೆಗೆ ಹೋಗುತ್ತಿದ್ದರು. ಮಳೆ ಮತ್ತು ಗಾಳಿಯ ಹೊರತಾಗಿಯೂ ನನ್ನ ಮಗು ಸೇರಿದಂತೆ ಎಲ್ಲರೂ ಸುರಕ್ಷಿತವಾಗಿ ಶಾಲೆ ತಲುಪುವಂತಾಗಿದೆ. ವಾಹನ ಯಾವಾಗ ಬರುವುದೆಂದು ಸಿ.ಎಚ್.ಶಂಕರ ಚಾಮಕೊಚ್ಚಿ ಫಲಾನುಭವಿ ಮಗುವಿನ ಪಾಲಕ ದೇಲಂಪಾಡಿ ಪಂಚಾಯಿತಿ ವ್ಯಾಪ್ತಿಯ ಚಾಮಕೊಚ್ಚಿ ಪ್ರದೇಶದ ಪರಿಶಿಷ್ಟ ಪಂಗಡಗಳ ಉನ್ನತಿ ಕಾಲನಿಯ ಸುಮಾರು ನಲ್ವತ್ತು ಮಕ್ಕಳು ಕುತ್ತಿಕೋಲ್ ಪಂಚಾಯಿತಿಯ ಬಂದಡ್ಕ ಶಾಲೆಗೆ ತಲುಪಲು ನಾಲ್ಕೂವರೆ ಕಿಲೋಮೀಟರ್ ಪ್ರಯಾಣಿಸಬೇಕಿತ್ತು. ಕಾಸರಗೋಡು ಬುಡಕಟ್ಟು ವಿಸ್ತರಣಾ ಕಚೇರಿಯ ಅಡಿಯಲ್ಲಿರುವ ವಿದ್ಯಾ ವಾಹಿನಿಯಿಂದ ಹೆಚ್ಚು ಪ್ರಯೋಜನ ಪಡೆಯುವ ಶಾಲೆಗಳಲ್ಲಿ ಬಂದಡ್ಕ ಶಾಲೆಯೂ ಒಂದು. ಬಂದಡ್ಕ ಗುಡ್ಡಗಾಡು ಗ್ರಾಮದ 16 ಪ್ರದೇಶಗಳ 244 ಮಕ್ಕಳು ವಿದ್ಯಾ ವಾಹಿನಿಯ ಭಾಗವಾಗಿರುವ 19 ವಾಹನಗಳಲ್ಲಿ ಶಾಲೆಗೆ ತೆರಳುತ್ತಾರೆ. ಈ ಯೋಜನೆಯ ಮೂಲಕ ಮಕ್ಕಳು ಶಾಲೆ ಬಿಡುವುದು ಮತ್ತು ತರಗತಿಗೆ ಬರಲು ಹಿಂಜರಿಯುವುದು ಕಡಿಮೆಯಾಗಿದೆ. ರಾಘವ, ಬಂದಡ್ಕ ಶಾಲಾ ಮುಖ್ಯ ಶಿಕ್ಷಕ ಸುಮಾರು ಎಂಟು ಕಿಲೋಮೀಟರ್ ವ್ಯಾಪ್ತಿಯ ಮಕ್ಕಳು ಪ್ರತಿದಿನ ಶಾಲೆಗೆ ಬರುತ್ತಾರೆ ಮತ್ತು ಮಕ್ಕಳು ವಾಹನಗಳಲ್ಲಿ ಒಟ್ಟಿಗೆ ಬರುವುದರಿಂದ ಅವರ ಮಾನಸಿಕ ಸಂತೋಷ ಮತ್ತು ಶಾಲೆಗೆ ಬರುವ ಆಸಕ್ತಿ ಹೆಚ್ಚಾಗಿದೆ. ಯೋಜನೆಯ ಅನುಷ್ಠಾನಕ್ಕೆ ವಿದ್ಯಾರ್ಥಿಗಳು ಮತ್ತು ಪೋಷಕರಿಂದ ಉತ್ತಮ ಸಹಕಾರವಿದೆ. ಚನಿಯ ನಾಯಕ್, ಚಾಲಕ