ಜಿಲ್ಲೆ

ಸ್ಪರ್ಧಾತ್ಮಕ ಗುಣದಿಂದ ಉದ್ಯೋಗವಕಾಶ - ಗಂಗಾಧರ ಈ ಮಂಡಗಳಲೆ ಸಲಹೆ - ವಿದ್ವತ್ ಕಾಲೇಜಿನ ಓರಿಯೆಂಟೇಶನ್ ಕಾರ್ಯಕ್ರಮ

Mangaluru - Nishantha Narayana

ಗುರುವಾಯನಕೆರೆ: ಪ್ರಥಮ ವರ್ಷದ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಿಗೆ ವಾಣಿಜ್ಯ ವಿಭಾಗದಲ್ಲಿರುವ ಉದ್ಯೋಗವಕಾಶ ಮತ್ತು ಸಿಎ -ಂಡೇಷನ್ ಬಗ್ಗೆ ವಿಸ್ತೃತ ಮಾಹಿತಿಯನ್ನು ನೀಡುವ ಮಹತ್ವದ ಓರಿಯೆಂಟೇಶನ್ ಕಾರ್ಯಕ್ರಮ ವಿದ್ವತ್ ಪಿಯು ಕಾಲೇಜಿನಲ್ಲಿ ಭಾನುವಾರ ನಡೆಯಿತು.


ವಿದ್ವತ್ ಪಿಯು ಕಾಲೇಜಿನ ಶೈಕ್ಷಣಿಕ ನಿರ್ದೇಶಕ ಗಂಗಾಧರ ಈ ಮಂಡಗಳಲೆ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಿಗಿರುವ ವಿಫುಲವಾದ ಉದ್ಯೋಗವಕಾಶಗಳ ಬಗ್ಗೆ ಮಾಹಿತಿ ನೀಡಿ ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಗುಣವನ್ನು ಮೈಗೂಡಿಸಿಕೊಳ್ಳಬೇಕೆಂದು ತಿಳಿಸಿದರು.


ವಿದ್ವತ್ ಪಿಯು ಕಾಲೇಜಿನ ಆಡಳಿತ ಅಽಕಾರಿ ಚಂದ್ರಶೇಖರ ಮಾತನಾಡಿ, ವಿದ್ಯಾರ್ಥಿಗಳು ವಿದ್ಯಾಭ್ಯಾಸದ ಜತೆಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿಯನ್ನು ಈಗಿನಿಂದಲೇ ನಡೆಸಬೇಕೆಂದು ಹೇಳಿದರು.


ವಿದ್ವತ್ ಪಿಯು ಕಾಲೇಜಿನ ಪ್ರಾಂಶುಪಾಲ ಅರುಣ್ ಕ್ಯಾಸ್ಟಲಿನೋ ಮಾತನಾಡಿ, ವಿದ್ವತ್ ಪಿಯು ಕಾಲೇಜಿನಲ್ಲಿ ನಡೆಯುವ -ಂಡೇಷನ್ ತರಬೇತಿಯ ಬಗ್ಗೆ ವಿದ್ಯಾರ್ಥಿಗಳಿಗೆ ವಿಸ್ತೃತ ಮಾಹಿತಿಯನ್ನು ನೀಡಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಹೇಗೆ ತಯಾರಿಯನ್ನು ನಡೆಸಬೇಕೆಂದು ತಿಳಿಸಿದರು.


ಉಪಪ್ರಾಂಶುಪಾಲ ಜಯೇಂದ್ರ ಬಂದ್ಯಾನ್, ಅರ್ಥಶಾಸ್ತ್ರ ವಿಭಾಗದ ಉಪನ್ಯಾಸಕಿ ಡಾ. ಮಹಿತ ಕುಮಾರಿ, ಕನ್ನಡ ವಿಭಾಗದ ಉಪನ್ಯಾಸಕ ನೀಲಕಂಠ ಉಪಸ್ಥಿತರಿದ್ದರು. ಆಂಗ್ಲ ವಿಭಾಗದ ಉಪನ್ಯಾಸಕ ಆಶಿಕ್ ಬಾಲಚಂದ್ರ ಕಾರ್ಯಕ್ರಮ ನಿರೂಪಿಸಿದರು.