ಚಿತ್ರದುರ್ಗ: ಬಂಡವಾಳ ಶಾಹಿ, ಉದ್ಯಮಿಗಳು, ಕಾರ್ಪೊರೇಟ್ ಸಂಸ್ಥೆಗಳಿಗೆ ಲಕ್ಷಾಂತರ ಎಕರೆ ಸರ್ಕಾರಿ ಜಮೀನು ಮಂಜೂರಿಗೆ ಮುಂದಾಗಿರುವ ರಾಜ್ಯ ಸರ್ಕಾರದ ನಡೆ ವಿರೋಧಿಸಿ 2023 ಫೆಬ್ರವರಿ 22ರಂದು ವಿಧಾನಸೌಧ ಚಲೋ ಹಮ್ಮಿಕೊಳ್ಳಲಾಗಿದೆ ಎಂದು ಭಾರತ ಕಮ್ಯನಿಸ್ಟ್ ಪಕ್ಷ ರಾಜ್ಯ ಕಾರ‌್ಯದರ್ಶಿ ಸಾತಿ ಸುಂದರೇಶ್ ಹೇಳಿದರು.
ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜ್ಯದಲ್ಲಿ ಅಂದಾಜು ಐವತ್ತು ಲಕ್ಷ ಕುಟುಂಬಗಳು ವಸತಿ ಹೀನವಾಗಿವೆ. ಈ ಕುಟುಂಬಗಳಿಗೆ ವಸತಿ ಕಲ್ಪಿಸಲು 5 ಲಕ್ಷ ಎಕರೆ ಜಮೀನು ಮಂಜೂರು ಕೋರಿ ನಡೆಸುತ್ತಿರುವ ಹೋರಾಟವನ್ನು ಸರ್ಕಾರ ನಿರ್ಲಕ್ಷಿೃಸಿದೆ ಎಂದು ದೂರಿದರು.
ಜಿಲ್ಲಾ ಕಾರ‌್ಯದರ್ಶಿ ಜಿ.ಸಿ.ಸುರೇಶ್‌ಬಾಬು ಮಾತನಾಡಿ, ಇಂಗಳದಾಳ್‌ದಲ್ಲಿ ತಾಮ್ರ ಮತ್ತು ಚಿನ್ನದ ಗಣಿಗಾರಿಕೆ ಮರು ಆರಂಭಿಸಬೇಕು. ಹಟ್ಟಿಗೋಲ್ಡ್ ಮೈನ್ಸ್ ಖಾಸಗಿಕರಣಕ್ಕೆ ನಮ್ಮ ವಿರೋಧವಿದೆ ಎಂದರು. ಮುಖಂಡರಾದ ದೊಡ್ಡ ಉಳ್ಳಾರ್ತಿ ಕರಿಯಣ್ಣ, ಬಿ.ರಾಜಪ್ಪ ಇತರರು ಇದ್ದರು.