ಮತದಾನದ ವಿಡಿಯೋವನ್ನು ಮೊಬೈಲ್‌ನಲ್ಲಿ ಸೆರೆಹಿಡಿಯಲಾಗಿದೆ. 
ಜಿಲ್ಲೆ

ಭದ್ರಾವತಿಯಲ್ಲಿ ಮತದಾನದ ವಿಡಿಯೋ ವೈರಲ್

ಶಿವಮೊಗ್ಗ: ಲೋಕಸಭೆ ಚುನಾವಣೆಯ ಮತಗಟ್ಟೆಯೊಳಗೆ ಮೊಬೈಲ್ ಕೊಂಡೊಯ್ಯಲು ನಿಷೇಧವಿದೆ. ಆದರೂ ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ವ್ಯಕ್ತಿಯೊಬ್ಬ ಮತ ಚಲಾಯಿಸಿರುವ ವಿಡಿಯೋ ವೈರಲ್ ಆಗಿದೆ.

ಭದ್ರಾವತಿಯ ಮತಗಟ್ಟೆಯೊಂದರಲ್ಲಿ ಯುವಕನೊಬ್ಬ ಮತ ಚಲಾಯಿಸಿದ ಬಳಿಕ ಮೊಬೈಲ್‌ನಲ್ಲಿ ವಿಡಿಯೋ ಚಿತ್ರೀಕರಿಸಿಕೊಂಡಿದ್ದಾನೆ. ವಿವಿ ಪ್ಯಾಟ್‌ನಲ್ಲಿ ಬಿಜೆಪಿ ಅಭ್ಯರ್ಥಿಗೆ ಮತ ಚಲಾಯಿಸಿರುವುದು ಬೆಳಕಿಗೆ ಬಂದಿದೆ. ವಿವಿ ಪ್ಯಾಟ್ ಅನ್ನು ವಿಡಿಯೋ ಮಾಡಲಾಗಿದೆ.