ರಾಮನಗರ: ಬೆಂಗಳೂರು–ಮೈಸೂರು ಹೆದ್ದಾರಿಯಲ್ಲಿ ಬಿಡದಿ ಬಳಿ ಯುವಕನೊಬ್ಬ ತನ್ನ ದ್ವಿಚಕ್ರ ವಾಹನದಲ್ಲಿ ಯುವತಿಯನ್ನು ಕೂರಿಸಿಕೊಂಡು ವ್ಹೀಲಿಂಗ್ ಮಾಡಿದ್ದಾನೆ. ಈ ದೃಶ್ಯವು ಸಾಮಾಜಿಕ ಜಾಲತಾಣ ವಾಟ್ಸ್‌ಆ್ಯಪ್ ಮತ್ತು ಫೇಸ್‌ಬುಕ್‌ನಲ್ಲಿ ಹರಿದಾಡುತ್ತಿದೆ.
ಹೆದ್ದಾರಿಯಲ್ಲಿ ದ್ವಿಚಕ್ರ ವಾಹನಗಳ ಪ್ರವೇಶವನ್ನು ನಿಷೇಧಿಸಲಾಗಿದೆ. ಆದರೂ, ಯುವಕ ಹೆದ್ದಾರಿ ಪ್ರವೇಶಿಸಿದ್ದಾನೆ. ಚಾಲನೆ ಸಂದರ್ಧದಲ್ಲಿ ಹೆಲ್ಮೆಟ್ ಕೂಡ ಹಾಕದ ಆತ, ಬಿಡದಿಯ ಸೇತುವೆ ಬಳಿ ವ್ಹೀಲಿಂಗ್ ಮಾಡಿದ್ದಾನೆ.
ವ್ಹೀಲಿಂಗ್ ಮಾಡಿರುವ ದ್ವಿಚಕ್ರ ವಾಹನ ನಂಬರ್ ಆಧರಿಸಿ, ಯುವಕನನ್ನು ಪತ್ತೆ ಹಚ್ಚಿ ಆತನ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಬಿಡದಿ ಠಾಣೆ ಪೊಲೀಸರು ತಿಳಿಸಿದ್ದಾರೆ.