ಜಿಲ್ಲೆ

VIDEO: ಹೆದ್ದಾರಿ ಕಾಮಗಾರಿಯಿಂದಾಗಿ ಆ ಪುರಾಣ ಪ್ರಸಿದ್ಧ ದೇವಸ್ಥಾನಕ್ಕೆ ಕಂಟಕ ಎದುರಾಗಿದೆ

vinaymk1969

ಮಂಡ್ಯ: ಹೆದ್ದಾರಿ ಕಾಮಗಾರಿಯಿಂದಾಗ ಪುರಾಣ ಪ್ರಸಿದ್ಧ ದೇವಾಲಯಕ್ಕೆ ಸಂಕಷ್ಟ ಎದುರಾಗಿದೆ. ಮಂಡ್ಯದ ಶ್ರೀರಂಗಪಟ್ಟಣದ ಕಾವೇರಿ ನದಿ ತೀರದಲ್ಲಿದೆ ಈ ಪುರಾತನ ದೇವಾಲಯ. ವಿಜಯನಗರ ಅರಸರ ಕಾಲದಲ್ಲಿ ನಿರ್ಮಾಣವಾಗಿರುವ ದೇವಾಲಯವೀಗ ಅವನತಿಯ ಹಾದಿಯಲ್ಲಿದೆ.

ಗದ್ದೆ ರಂಗನಾಥಸ್ವಾಮಿ ದೇವಾಲಯವೆಂದೇ ಪ್ರಸಿದ್ಧವಾಗಿರುವ ಈ ದೇವಾಲಯಕ್ಕೆ ಐದು ನೂರು ವರ್ಷಗಳಿಗೂ ಹೆಚ್ಚಿನ ಇತಿಹಾಸವಿದೆ. ಒಂಭತ್ತು ಅಡಿ ಬಂಡೆಯಲ್ಲ ಶಯನ ಶೈಲಿಯಲ್ಲಿರುವ ರಂಗನಾಥ ಸ್ವಾಮಿಯನ್ನು ಇಲ್ಲಿ ನೋಡಬಹುದಾಗಿದೆ. ಹೆದ್ದಾರಿ ಕಾಮಗಾರಿ ವೇಳೆ ದೇವಸ್ಥಾನವನ್ನು ಪಕ್ಕದಲ್ಲೇ ಇರುವ ಮುಕ್ಕಾಲು ಎಕರೆ ಸರ್ಕಾರಿ ಜಾಗಕ್ಕೆ ಸ್ಥಳಾಂತರಿಸುವುದಾಗಿ ಅಂದಿನ ಅಸಿಸ್ಟೆಂಟ್ ಕಮಿಷನರ್ ಮತ್ತು ಅಧಿಕಾರಿಗಳು ಸಮೀಕ್ಷೆ ನಡೆಸಲು ಬಂದಾಗ ಹೇಳಿದ್ದರು ಎಂಬುದನ್ನು ಖ್ಯಾತ ಜ್ಯೋತಿಷಿ ಭಾನುಪ್ರಕಾಶ್ ಶರ್ಮಾ ತಿಳಿಸಿದ್ದಾರೆ.

ಆದರೆ ಭರವಸೆ ಈಡೇರಿಲ್ಲ. ಈಗ ದೇವಸ್ಥಾನದ ಛಾವಣಿ ಮಟ್ಟಕ್ಕೆ ಸುತ್ತ ಮಣ್ಣು ಸೇರಿಸಿರುವುದು ಕಂಡರೆ ಅದನ್ನೂ ಮುಚ್ಚಿಬಿಡುತ್ತಾರೆಯೇ ಎಂಬ ಆತಂಕದಲ್ಲಿದ್ದಾರೆ ಭಕ್ತರು. ಈ ಕುರಿತ ಪೂರ್ಣ ವರದಿ ನೋಡುವುದಕ್ಕೆ ಮೇಲಿನ ವಿಡಿಯೋ ಕ್ಲಿಕ್ಕಿಸಿ. (ದಿಗ್ವಿಜಯ ನ್ಯೂಸ್)