ಜಿಲ್ಲೆ

VIDEO: ಡಿಚ್ಚಿ ಮುಬಾರಕ್ ಪೊಲೀಸರ ಬಲೆಗೆ

Mysuru Rural

ಬೆಂಗಳೂರು: ಡಿಜೆ ಹಳ್ಳಿ ಗಲಭೆ ಸಂದರ್ಭದಲ್ಲಿ ಡಿಸಿಪಿಯ ಇನ್ನೋವಾ ವಾಹನಕ್ಕೆ ಎಗರಿ ಎಗರಿ ಡಿಚ್ಚಿ ಹೊಡೆದು ಗಮನಸೆಳೆದ ಡಿಚ್ಚಿ ಮುಬಾರಕ್​ ನಿನ್ನೆ ಪೊಲೀಸರ ಬಲೆಗೆ ಬಿದ್ದಿದ್ದಾನೆ. ಗಾಂಜಾ ಮತ್ತಿನಲ್ಲಿದ್ದ ಈತ ಪೊಲೀಸರ ಬಗ್ಗೆ ಆಕ್ರೋಶಿತನಾಗಿದ್ದ. ಗಲಭೆ ಸಂದರ್ಭವನ್ನು ಆಕ್ರೋಶ ಹೊರಹಾಕುವುದಕ್ಕೆ ಬಳಸಿಕೊಂಡಿದ್ದ!

ಆತ ಡಿಚ್ಚಿ ಹೊಡೆಯುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ದಾಖಲಾಗಿತ್ತು. ಅದರಲ್ಲಿ ಈತನ ಗುರುತು ಪತ್ತೆಹಚ್ಚಿದ ಪೊಲೀಸರು ಬಂಧನಕ್ಕೆ ಬಲೆ ಬೀಸಿದ್ದರು. ಅದಕ್ಕೆ ಆತ ಬಿದ್ದಿದ್ದಾನೆ. ಡಿಜೆ ಹಳ್ಳಿ ವ್ಯಾಪ್ತಿಯಲ್ಲಿ ಗಾಂಜಾ ಗಿರಾಕಿಗಳಿಗೆ ಈತನೇ ಗಾಂಜಾ ಪೂರೈಕೆದಾರ. ಈತನ ದಂಧೆಗೆ ಪೊಲೀಸರು ಅನೇಕ ಬಾರಿ ಅಡ್ಡಿ ಉಂಟುಮಾಡಿದ್ದರು. ಇದರಿಂದ ಆತ ಆಕ್ರೋಶಿತನಾಗಿದ್ದ.

ಈಗ ಈತನ ಹಲವು ಅಪರಾಧ ಪ್ರಕರಣಗಳ ಪಟ್ಟಿಯ ಜತೆಗೆ ಗಲಭೆ ಸಂದರ್ಭದ ಅಪರಾಧವೂ ಸೇರಿಕೊಂಡಿದೆ. ಪೊಲೀಸರು ಈತನನ್ನು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ಈತ ಡಿಚ್ಚಿ ಹೊಡೆಯುತ್ತಿರುವ ದೃಶ್ಯ ನೋಡೋದಕ್ಕೆ ಮೇಲಿನ ವಿಡಿಯೋ ಕ್ಲಿಕ್ ಮಾಡಿ. (ದಿಗ್ವಿಜಯ ನ್ಯೂಸ್)