ಜಿಲ್ಲೆ

ಎಲೈಟ್ ಕ್ರಿಕೆಟ್ ಕ್ಲಬ್, ಕೆಜಿಎಸ್ ಸ್ಟ್ರೈಕರ್ಸ್‌ ತಂಡಕ್ಕೆ ಗೆಲುವು

ಮಡಿಕೇರಿ: ಕೊಡಗು ಗೌಡ ಯುವ ವೇದಿಕೆ ಆಶ್ರಯದಲ್ಲಿ ಮೊಟ್ಟಮೊದಲ ಬಾರಿಗೆ ಅರೆಭಾಷಿಕ ಗೌಡ ಜನಾಂಗದವರಿಗೆ ಜನರಲ್ ಕೆ.ಎಸ್.ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಲೆದರ್ ಬಾಲ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಎಲೈಟ್ ಕ್ರಿಕೆಟ್ ಕ್ಲಬ್, ಕೆಜಿಎಸ್ ಸ್ಟ್ರೈಕರ್ಸ್‌ ತಂಡ ಗೆಲುವು ಸಾಧಿಸಿತು.


ದಿನದ ಮೊದಲ ಪಂದ್ಯದಲ್ಲಿ ಮಡಿಕೇರಿ ಚಾಂಪಿಯನ್ ಭಾವ(ಎಂಸಿಬಿ) ಮತ್ತು ಎಲೈಟ್ ಕ್ರಿಕೆಟ್ ಕ್ಲಬ್ ನಡುವೆ ನಡೆಯಿತು. ಟಾಸ್ ಸೋತ ಎಂಸಿಬಿ ತಂಡ ನಿಗದಿತ ೧೦ ಓವರ್‌ನಲ್ಲಿ ೬ ವಿಕೆಟ್ ಕಳೆದುಕೊಂಡು ೯೨ ರನ್ ಕಲೆ ಹಾಕಿತು. ತಂಡದ ಪರ ಮುನಿಶ್ ೧೧, ಕುಶ್ವಂತ್ ಕೋಳುಬೈಲು ೬, ಹರ್ಷ ಕೊಂಬಾರನ ೪೯ರನ್ ಕಲೆ ಹಾಕಿದರು. ಎಲೈಟ್ ಕ್ರಿಕೆಟ್ ಕ್ಲಬ್ ಪರ ಲೋಕೇಶ್ ೩ ವಿಕೆಟ್ ಕಬಳಿಸಿದರೆ, ಎಂ.ಎಚ್.ಅವಿನ್, ವಿಕ್ಕಿ ತಲಾ ಒಂದೊಂದು ವಿಕೆಟ್ ಕಬಳಿಸಿದರು.


ಗುರಿ ಬೆನ್ನಟ್ಟಿದ ಎಲೈಟ್ ಕ್ರಿಕೆಟ್ ಕ್ಲಬ್ ತಂಡ ೯.೧ ಓವರ್‌ನಲ್ಲಿ ೪ ವಿಕೆಟ್ ಕಳೆದುಕೊಂಡು ಗೆಲುವಿದ ದಡ ಸೇರಿತು. ತಂಡದ ಪರ ವಿಕ್ಕಿ ೧೭ ಎಸೆತದಲ್ಲಿ ೨ ಸಿಕ್ಸರ್, ೩ ಬೌಂಡರಿ ನೆರವಿನೊಂದಿಗೆ ೩೫ ರನ್ ಕಲೆ ಹಾಕಿದರೆ, ಲೋಕೇಶ್ ೧೬, ಮಹೇಶ್ ೧೦, ಚೇತನ್ ೧೫ ರನ್ ಕಲೆ ಹಾಕಿದರು. ಎಂಸಿಬಿ ಪರ ಹರ್ಷ ಕೊಂಬಾರನ ೨ ವಿಕೆಟ್ ಪಡೆದರೆ, ಡಾ.ಕುಶ್ವಂತ್ ಕೋಳಿಬೈಲು ಹಾಗೂ ಮುನೀಶ್ ತಲಾ ಒಂದೊಂದು ವಿಕೆಟ್ ಪಡೆದರು. ಎಲೈಟ್ ಕ್ರಿಕೆಟ್ ಕ್ಲಬ್ ಲೋಕೇಶ್ ಬ್ಯಾಟಿಂಗ್‌ನಲ್ಲಿ ೧೬ ರನ್, ಬೌಲಿಂಗ್ ೩ ವಿಕೆಟ್ ಪಡೆದು ಪ್ಲೇಯರ್ ಆಫ್ ದಿ ಮ್ಯಾಚ್ ಬಹುಮಾನವನ್ನು ಪಡೆದುಕೊಂಡರು.


ಕೆಜಿಎಸ್ ಸ್ಟ್ರೈಕರ್ಸ್‌ ಮತ್ತು ಪ್ಲಾಂಟರ್ಸ್‌ ಕ್ಲಬ್ ಬಿಳಿಗೇರಿ ನಡುವಿನ ಎರಡನೇ ಪಂದ್ಯದಲ್ಲಿ ಟಾಸ್ ಸೋತ ಕೆಜಿಎಸ್ ಸ್ಟ್ರೈಕರ್ಸ್‌ ತಂಡ ನಿಗದಿತ ೧೦ ಓವರ್‌ನಲ್ಲಿ ೬ ವಿಕೆಟ್ ಕಳೆದುಕೊಂಡು ೯೩ ರನ್ ಕಲೆ ಹಾಕಿತು. ತಂಡದ ಪರ ಶರತ್ ೧೧, ಸಿ.ಎಚ್.ನಯನ್ ೧೯, ಶರ್ವಿನ್ ೧೧, ಪವನ್ ೧೪ ರನ್ ದಾಖಲಿಸಿದರು. ಪಂದ್ಯಾಟದಲ್ಲಿ ಪ್ಲಾಂಟರ್ಸ್‌ ಕ್ಲಬ್ ಬಿಳಿಗೇರಿ ತಂಡ ಆಟಗಾರರು ೨೫ ಉಚಿತ ರನ್ ನೀಡಿದರು. ಬಿಳಿಗೇರಿ ಪರ ರವಿಚಂದ್ರ ೨ ವಿಕೆಟ್ ಕಬಳಿಸಿದರೆ, ತಮ್ಮಣ್ಣ ಹುದೇರಿ, ರಾಮ್ ಸ್ವರೂಪ್, ತುಷಾರ್ ತಲಾ ಒಂದೊಂದು ವಿಕೆಟ್ ಪಡೆದುಕೊಂಡರು.


ಗುರಿಬೆನ್ನಟ್ಟಿದ ಪ್ಲಾಂಟರ್ಸ್‌ ಕ್ಲಬ್ ಬಿಳಿಗೇರಿ ತಂಡ ೭ ವಿಕೆಟ್ ಕಳೆದುಕೊಂಡು ೭೨ ರನ್‌ಗಳಿಸಿ ೨೧ ರನ್‌ಗಳ ಅಂತರದಲ್ಲಿ ಸೋಲುಂಡಿತ್ತು. ತಂಡದ ಪರ ರಾಮ್ ಸ್ವರೂಪ್ ೧೬ ಎಸೆತದಲ್ಲಿ ೨೬ ರನ್ ಕಲೆಹಾಕಿದರೆ, ಕುಶಾನ್ ಗೌಡ ೧೦ ರನ್ ದಾಖಲಿಸಿದರು. ಉಳಿದಂತೆ ಕೆಜಿಎಸ್ ಸ್ಟ್ರೈಕರ್ಸ್‌ ತಂಡ ೨೪ ಉಚಿತ ರನ್‌ಗಳನ್ನು ಬಿಟ್ಟುಕೊಟ್ಟಿತ್ತು. ತಂಡದ ಪರ ಅಭಿ ಬಾಕಿಲನ ಮತ್ತು ಪ್ರತೀಕ್ ತಲಾ ೨ ವಿಕೆಟ್ ಪಡೆದರೆ, ಶರತ್, ಪವನ್ ತಲಾ ಒಂದೊಂದು ವಿಕೆಟ್ ಪಡೆದರು. ಕೆಜಿಎಸ್ ಸ್ಟ್ರೈಕರ್ಸ್‌ ತಂಡ ಶರತ್ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿಯನ್ನು ಪಡೆದುಕೊಂಡರು.


ಪ್ಲಾಂಟರ್ಸ್‌ ಕ್ಲಬ್ ಬಿಳಿಗೇರಿ ಮತ್ತು ಎಲೈಟ್ ಕ್ರಿಕೆಟ್ ಕ್ಲಬ್ ನಡುವಿನ ೩ನೇ ಪಂದ್ಯದಲ್ಲಿ ಟಾಸ್ ಗೆದ್ದ ಪ್ಲಾಂಟರ್ಸ್‌ ಕ್ಲಬ್ ಬಿಳಿಗೇರಿ ತಂಡ ನಿಗದಿತ ೧೦ ಓವರ್‌ನಲ್ಲಿ ೪ ವಿಕೆಟ್ ಕಳೆದುಕೊಂಡು ೫೮ ರನ್ ದಾಖಲಿಸಲಷ್ಟೆ ಶಕ್ತವಾಯಿತು. ತಂಡದ ಪರ ತುಷಾರ್ ೨೮ ಎಸೆತದಲ್ಲಿ ೨೬ರನ್ ಹಾಗೂ ವರುಣ್ ಮೂಲೆಮಜಲು ೧೧ ರನ್ ದಾಖಲಿಸಿದರು. ಎಲೈಟ್ ಕ್ರಿಕೆಟ್ ಕ್ಲಬ್ ಪರ ಎಂ.ಎಚ್.ಅವಿನ್ ೨ ವಿಕೆಟ್ ಪಡೆದುಕೊಂಡರೆ, ಲೋಕೇಶ್ ೧ ವಿಕೆಟ್ ಪಡೆದುಕೊಂಡರು.


ಗುರಿ ಬೆನ್ನಟ್ಟಿದ ಎಲೈಟ್ ಕ್ರಿಕೆಟ್ ಕ್ಲಬ್ ತಂಡ ೫.೩ ಓವರ್‌ನಲ್ಲಿ ೪ ವಿಕೆಟ್ ಕಳೆದುಕೊಂಡು ಗೆಲುವಿನ ದಡ ಸೇರಿತು. ತಂಡದ ಪರ ಲೋಕೇಶ್ ೧೪ ಎಸೆತದಲ್ಲಿ ೨ ಸಿಕ್ಸರ್, ೩ ಬೌಂಡರಿ ನೆರವಿನೊಂದಿಗೆ ೨೮ರನ್ ಕಲೆ ಹಾಕಿದರು. ಪ್ಲಾಂಟರ್ಸ್‌ ಕ್ಲಬ್ ಬಿಳಿಗೇರಿ ತಂಡದ ಪರ ತಮ್ಮಣ್ಣ ಹುದೇರಿ ಮತ್ತು ಲೋಹಿತ್ ತೆಕ್ಕಡೆ ತಲಾ ೨ ವಿಕೆಟ್ ಕಬಳಿಸಿದರು. ಎಲೈಟ್ ಕ್ರಿಕೆಟ್ ಕ್ಲಬ್‌ನ ಲೋಕೇಶ್ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿಯನ್ನು ಪಡೆದುಕೊಂಡರು.


ಚಿತ್ರ: ಎಂಡಿಕೆ೬: ಲೆದರ್ ಬಾಲ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಪ್ಲಾಂಟರ್ಸ್‌ ಕ್ಲಬ್ ಬಿಳಿಗೇರಿ ಮತ್ತು ಕೆಜಿಎಸ್ ಸ್ಟ್ರೈಕರ್ಸ್‌ ತಂಡಗಳ ಹಣಾಹಣಿ.
-ಲೋಗೋ