ಜಿಲ್ಲೆ

ಹಿರೇಕೆರೂರಲ್ಲಿ ಮಾತೃಛಾಯಾ ಸಂಘದಿಂದ ವಿಜಯೋತ್ಸವ

ಹಿರೇಕೆರೂರ: ಚಂದ್ರಯಾನ-3 ಲ್ಯಾಂಡ್ ಯಶಸ್ವಿಯಾದ ಹಿನ್ನೆಲೆ, ಕೇಂದ್ರ ಸರ್ಕಾರ ವಿಕ್ರಮ ಲ್ಯಾಂಡರ್ ಇಳಿದ ಜಾಗವನ್ನು ಶಿವಶಕ್ತಿ ಸ್ಥಳ, ತಿರಂಗಾ ಎಂದು ನಾಮಕರಣ ಮಾಡಿದ್ದಕ್ಕಾಗಿ ಆ. 23 ರಂದು ರಾಷ್ಟ್ರೀಯ ಬಾಹ್ಯಾಕಾಶ ದಿನವಾಗಿ ಘೊಷಿಸಿದ್ದರಿಂದ ಅದನ್ನು ಸ್ವಾಗತಿಸಿ ಪಟ್ಟಣದ ಮಾತೃಛಾಯಾ ಮಹಿಳಾ ಸಂಘದಿಂದ ಶುಕ್ರವಾರ ವಿಜಯೋತ್ಸವ ಆಚರಿಸಲಾಯಿತು.

ಗೀತಾ ಕೊಟ್ವಾಲ್, ಗೀತಾ ಪಾಟೀಲ, ಮಂಜುಳಾ ಚಕ್ರಸಾಲಿ, ಪರಿಮಳಾ ಶಿರಗಂಬಿ, ಲತಾ ಬಣಕಾರ, ವಂದನಾ ನಾಡಿಗೇರ, ಶೀತಲ್ ಶೆಟ್ಟರ್, ಅನಿತಾ ಕುಂಕುಮಗಾರ, ರೇಖಾ ನಲವಾಲದ, ಮಧುರಾ ಬಣಕಾರ, ಪೂಜಾ ಅಂಗಡಿ ಹಾಗೂ ಪದಾಧಿಕಾರಿಗಳು ಇದ್ದರು.