ಜಿಲ್ಲೆ

ನುಗ್ಗೇಹಳ್ಳಿ ಕೃಷಿ ಪತ್ತಿನ ಸಂಘಕ್ಕೆ ವಿಕ್ಟರ್ ಅಧ್ಯಕ್ಷ

ನುಗ್ಗೇಹಳ್ಳಿ: ಹೋಬಳಿ ಕೇಂದ್ರದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಎಂ.ದಾಸಪುರ ಗ್ರಾಮದ ಜೆಡಿಎಸ್ ಬೆಂಬಲಿತ ವಿಕ್ಟರ್ ಅವಿರೋಧವಾಗಿ ಆಯ್ಕೆಯಾದರು.

ಹುಲಿಕೆರೆ ಗ್ರಾಮದ ಸಂಪತ್‌ಕುಮಾರ್ ಅವರ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ಮಂಗಳವಾರ ಚುನಾವಣೆ ನಡೆಯಿತು.

ಅಧ್ಯಕ್ಷ ಸ್ಥಾನಕ್ಕೆ ವಿಕ್ಟರ್ ಒಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಚುನಾವಣಾ ಅಧಿಕಾರಿ ಸಿಡಿಒ ವಿಜಯೇಂದ್ರ ವಿಕ್ಟರ್ ಅವಿರೋಧ ಆಯ್ಕೆ ಪ್ರಕಟಿಸಿದರು.

ನೂತನ ಅಧ್ಯಕ್ಷ ವಿಕ್ಟರ್ ಅವರನ್ನು ಶಾಸಕ ಸಿ.ಎನ್. ಬಾಲಕೃಷ್ಣ ಅವರು ಅಭಿನಂದಿಸಿ ಮಾತನಾಡಿ, ನುಗ್ಗೇಹಳ್ಳಿ ಕೃಷಿ ಪತ್ತಿನ ಸಹಕಾರ ಸಂಘದಿಂದ ರೈತರಿಗೆ 12 ಕೋಟಿ 77 ಲಕ್ಷ ರೂ. ಬೆಳೆ ಸಾಲ ವಿತರಿಸಲಾಗಿದೆ. ಇದರಿಂದ ಈ ಭಾಗದ ರೈತರಿಗೆ 9 ಕೋಟಿ ರೂ. ಸಾಲ ಮನ್ನವಾಗಿರುವುದರಿಂದ 13 ಹಳ್ಳಿ ರೈತರಿಗೆ ಅನುಕೂಲವಾಗಿದೆ. ಶ್ರೀ ಶಕ್ತಿ ಸಂಘಗಳಿಗೆ 65 ಲಕ್ಷ ಸಾಲ ನೀಡಲಾಗಿದೆ ಎಂದು ತಿಳಿಸಿದರು.

ನೂತನ ಅಧ್ಯಕ್ಷ ವಿಕ್ಟರ್, ಮಾಜಿ ಅಧ್ಯಕ್ಷ ಎಚ್.ಪಿ.ಸಂಪತ್‌ಕುಮಾರ್ ಮಾತನಾಡಿದರು.

ಕಾರ್ಯ ನಿರ್ವಹಣಾಧಿಕಾರಿ ಡಿ.ವಿನಯ್, ಜಿಪಂ ಮಾಜಿ ಉಪಾಧ್ಯಕ್ಷ ಎಚ್.ಎಂ.ನಟರಾಜ್, ತಾಪಂ ಮಾಜಿ ಉಪಾಧ್ಯಕ್ಷ ಎಚ್.ಜೆ.ಕಿರಣ್, ಎಪಿಎಂಸಿ ಮಾಜಿ ಅಧ್ಯಕ್ಷ ಬಿ.ಆರ್.ದೊರೆಸ್ವಾಮಿ, ತಾಪಂ ಮಾಜಿ ಸದಸ್ಯರಾದ ಪುಟ್ಟಸ್ವಾಮಿ, ಎಂ.ಆರ್.ವಾಸು, ಗ್ರಾಪಂ ಅಧ್ಯಕ್ಷ ವಿಠ್ಠಲ್ ಕುಮಾರ್, ಗ್ರಾಪಂ ಸದಸ್ಯರಾದ ಶಿವಕುಮಾರ್, ಕೊಪ್ಪಲು ಸ್ವಾಮಿ, ನಟರಾಜ, ಹೊನ್ನೇಗೌಡ, ಹೆಬ್ಬಳಲು ರವಿ, ಅಕ್ಕನಹಳ್ಳಿ ಪುಟ್ಟರಾಜು, ಬಾಣನಕರೆ ಉಮೇಶ್, ಅಕ್ಕನಹಳ್ಳಿ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಮಧು, ಬೆಳಗುಲಿ ಸಂಘದ ಅಧ್ಯಕ್ಷ ಮೂಡಲಗಿರಿಗೌಡ, ಆಡಳಿತ ಮಂಡಳಿ ನಿರ್ದೇಶಕರಾದ ಎಚ್.ಬಿ.ರಂಗಸ್ವಾಮಿ, ಪಟೇಲ್ ಕುಮಾರ್, ಕಾರೇಕೆರೆ ಪ್ರಕಾಶ್, ಡಿ.ಟಿ.ಕೃಷ್ಣೇಗೌಡ, ಗೌರಮ್ಮ ತೊಪೇಗೌಡ, ಎನ್.ಎನ್.ಮಹೇಶ್, ಕುಮಾರಸ್ವಾಮಿ, ಛಾಯಾದೇವಿ ಗುರುರಾಜ್, ಮುಖಂಡರಾದ ಕೃಪಾ ಶಂಕರ್, ಗಿರೀಶ್, ಎನ್.ಸಿ.ಕುಮಾರ್, ಅಕ್ಕಿ ಉಮೇಶ್, ಗುಂಡಣ್ಣ, ಮಾದಲಗೆರೆ ದಿಲೀಪ್, ಬಸವನಪುರ ಪ್ರಕಾಶ್, ವೆಂಕಟೇಶ್, ಹಿಟಾಚಿ ಗಿರೀಶ್, ಕಾಂತರಾಜ್, ಕಿಶೋರ್, ಸತೀಶ್, ರಾಜ್ ಕುಮಾರ್, ಕಾಂತರಾಜ್ ಇತರರು ಇದ್ದರು.