ಜಿಲ್ಲೆ

ಮೀನಿನ ಹೊಂಡಕ್ಕೆ ವಿಷ ಹಾಕಿದ ದುಷ್ಕರ್ವಿುಗಳು, 25 ಸಾವಿರಕ್ಕೂ ಅಧಿಕ ಮೀನುಗಳು ಸಾವು

Haveri

ರಾಣೆಬೆನ್ನೂರ: ಮೀನು ಸಾಕಾಣಿಕೆ ಮಾಡಿದ ಹೊಂಡಕ್ಕೆ ದುಷ್ಕರ್ವಿುಗಳು ವಿಷ ಹಾಕಿದ ಪರಿಣಾಮ 25 ಸಾವಿರಕ್ಕೂ ಅಧಿಕ ಮೀನುಗಳು ಮೃತಪಟ್ಟ ಘಟನೆ ತಾಲೂಕಿನ ಮೆಣಸಿನಹಾಳ ಗ್ರಾಮದಲ್ಲಿ ಶನಿವಾರ ಸಂಭವಿಸಿದೆ.

ಗ್ರಾಮದ ರೈತ ಸಿದ್ದನಗೌಡ ಪಾಟೀಲ ಎಂಬುವರು ತಮ್ಮ ಜಮೀನಿನಲ್ಲಿ ಹೊಂಡ ನಿರ್ವಿುಸಿಕೊಂಡು 25 ಸಾವಿರಕ್ಕೂ ಅಧಿಕ ಮೀನುಗಳನ್ನು ಸಾಕಾಣಿಕೆ ಮಾಡಿದ್ದರು. ಮೀನುಗಳು ಉತ್ತಮವಾಗಿ ಬೆಳೆದು ಮಾರಾಟಕ್ಕೆ ಸಿದ್ಧಗೊಂಡಿದ್ದವು. ಆದರೆ, ಯಾರೋ ದುಷ್ಕರ್ವಿುಗಳು ಹೊಂಡದಲ್ಲಿ ವಿಷ ಹಾಕಿದ ಪರಿಣಾಮ ಎಲ್ಲ ಮೀನುಗಳು ಮೃತಪಟ್ಟಿವೆ.

ಇದರಿಂದ ರೈತ ಸಿದ್ದನಗೌಡ ಕಣ್ಣೀರು ಹಾಕುತ್ತಿದ್ದು, ಪೊಲೀಸರು ಕೂಡಲೆ ಆರೋಪಿಗಳನ್ನು ಪತ್ತೆ ಮಾಡಿ ನಮಗೆ ನ್ಯಾಯ ಒದಗಿಸಿಕೊಡಬೇಕು ಎಂದು ಒತ್ತಾಯಿಸಿದ್ದಾರೆ. ಘಟನಾ ಸ್ಥಳಕ್ಕೆ ಹಲಗೇರಿ ಠಾಣೆ ಪೊಲೀಸರು ಭೇಟಿ ನೀಡಿ, ಪರಿಶೀಲಿಸಿದ್ದಾರೆ.