ತುಮಕೂರು: ಉಚ್ಚೆಮಂಜನನ್ನು ಕೊಲೆ ಮಾಡಿದ್ದ ಆರೋಪಿ ಕಾಲಿಗೆ ಪೊಲೀಸರು ಭಾನುವಾರ ಬೆಳಗಿನ ಜಾವ ಗುಂಡು ಹಾರಿಸಿ ಬಂಧಿಸಿದ್ದಾರೆ. ಈ ವೇಳೆ ಎಎಸ್‌ಐ ಗಾಯಗೊಂಡಿದ್ದಾರೆ. ಅಜ್ಜಪ್ಪನಹಳ್ಳಿಯ ಪಾಳುಬಿದ್ದ ಸಮುದಾಯ ಭವನದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿ ಗುಬ್ಬಿ ತಾಲೂಕಿನ ಗೌರಿಪುರದ ವಿಕಾಸ್ ಅಲಿಯಾಸ್ ಆರ್‌ಎಕ್ಸ್ ವಿಕ್ಕಿ (24) ಪೊಲೀಸರ ಮೇಲೆ ಮಾರಣಾಂತಿಕ ಹಲ್ಲೆಗೆ ಯತ್ನಿಸಿ ತಪ್ಪಿಸಿಕೊಳ್ಳಲು ಯತ್ನಿಸಿದಾಗ ತಿಲಕ್ ಪಾರ್ಕ್ ಠಾಣೆ ಪಿಎಸ್ಸೈ ನವೀನ್ ಗುಂಡು ಹಾರಿಸಿದ್ದಾರೆ.
ಗಾಯಗೊಂಡಿದ್ದ ವಿಕ್ಕಿಯನ್ನು ವಶಕ್ಕೆ ಪಡೆದ ಪೊಲೀಸರು ಹಾಗೂ ಗಾಯಗೊಂಡಿದ್ದ ಎಎಸ್ಸೈ ಪರಮೇಶ್ವರ್ ಅವರನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆರೋಪಿ ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿಗೆ ಸ್ಥಳಾಂತರಿಸಲಾಗಿದೆ.
ನಟೋರಿಯಸ್ ರೌಡಿ: ಕೊಡಿಗೇನಹಳ್ಳಿ ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದ ವಿಕ್ಕಿ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದರು. ಅಲ್ಲದೆ, ಎನ್‌ಇಪಿಎಸ್ ಠಾಣಾ ವ್ಯಾಪ್ತಿಯಲ್ಲಿ ದರೋಡೆ ಯತ್ನ ಪ್ರಕರಣದಲ್ಲೂ ಭಾಗಿಯಾಗಿದ್ದ. ಜತೆಗೆ ಬೆಂಗಳೂರು ಗ್ರಾಮಾಂತರದಲ್ಲೂ ವಿಕ್ಕಿ ವಿರುದ್ಧ ಹಲವು ಪ್ರಕರಣಗಳಿವೆ.
ಡಿ.2ರಂದು ನಡೆದಿದ್ದ ಮಂಜನ ಕೊಲೆ ಪ್ರಕರಣ ಭೇದಿಸಲು 3 ತಂಡಗಳನ್ನು ರಚಿಸಲಾಗಿತ್ತು. ತಿಲಕ್‌ಪಾರ್ಕ್ ಠಾಣೆ ಪಿಎಸ್ಸೈ ನವೀನ್ ನೇತೃತ್ವದ ತಂಡವು ಆರೋಪಿಯನ್ನು ಬಂಧಿಸಲು ತೆರಳಿದಾಗ ಆತ ಪೊಲೀಸರ ಮೇಲೆ ಪ್ರತಿದಾಳಿ ನಡೆಸಿದ್ದು, ಪಿಎಸ್ಸೈ ನವೀನ್ ಆತ್ಮರಕ್ಷಣೆಗಾಗಿ ಗುಂಡು ಹಾರಿಸಿದ್ದಾರೆ. ಎಎಸ್ಸೈ ಪರಮೇಶ್ ಎಡಗೈ ತೋಳಿಗೆ ಗಾಯವಾಗಿದೆ. ಟಿ.ಜೆ.ಉದೇಶ್ ಎಎಸ್ಪಿ