ಮೇಲುಕೋಟೆ ಕಲ್ಯಾಣಿಯಲ್ಲಿ ರಾಜ್ಯಪಾಲರಾಗಿದ್ದ ಸಿ.ಪಿ.ರಾಧಾಕೃಷ್ಣನ್ ತುಳಸಿ ನೆಟ್ಟು ತೋಟ ನಿರ್ಮಾಣಕ್ಕೆ ಚಾಲನೆ ನೀಡಿದ್ದ ಸಂದರ್ಭ. 
ಜಿಲ್ಲೆ

9ಕ್ಕೆ ಮೇಲುಕೋಟೆಗೆ ಉಪರಾಷ್ಟ್ರಪತಿ ಭೇಟಿ

ಲೋಕೇಶ್ ಮನು. ಡಿ

ಮೇಲುಕೋಟೆ: ಉಪರಾಷ್ಟ್ರಪತಿ ಸಿ.ಪಿ.ರಾಧಾಕೃಷ್ಣನ್ ನ. 9ರಂದು ಮೇಲುಕೋಟೆಗೆ ಆಗಮಿಸುತ್ತಿದ್ದಾರೆ.

ರಾಜ್ಯಪಾಲರಾಗಿದ್ದ ರಾಧಾಕೃಷ್ಣನ್ ಈ ಹಿಂದೆ ಮೇಲುಕೋಟೆಗೆ ಆಗಮಿಸಿ ಚೆಲುವನಾರಾಯಣಸ್ವಾಮಿ ದರ್ಶನ ಪಡೆದು ದೇಗುಲದ ಸ್ಥಾನೀಕರ ಮನವಿಗೆ ಸ್ಪಂದಿಸಿ ಕಲ್ಯಾಣಿ ಸಮುಚ್ಚಯಕ್ಕೆ ಬಂದು ತುಳಿಸಿ ಗಿಡ ನೆಟ್ಟಿ ತುಳಸಿ-ಹೂ ತೋಟ ನಿರ್ಮಾಣಕ್ಕೆ ಚಾಲನೆ ನೀಡಿದ್ದರು.

ರಾಮಾನುಜರ ಕರ್ಮಭೂಮಿಯಾದ ಮೇಲುಕೋಟೆಯಲ್ಲಿ ಚೆಲುವನಾರಾಯಣಸ್ವಾಮಿಗೆ ಪೂಜೆಗೆ ಅರ್ಪಿಸಲು ತುಳಸಿ-ಹೂತೋಟಗಳು ನಿರ್ಮಾಣವಾಗಬೇಕು, ಪರಿಸರ ಪ್ರೇಮಿಗಳಾಗಿ ಭಕ್ತಿಯಿಂದ ಸೇವೆ ಮಾಡಿ ಮೇಲುಕೋಟೆಯಲ್ಲಿ ತುಳಿಸಿ ತೋಟಗಳನ್ನು ಹೆಚ್ಚೆಚ್ಚು ನಿರ್ಮಾಣ ಮಾಡಿ ಎಂದು ಹಾರೈಸಿದ್ದರು. ಅಹೋಬಿಲ ಮಠದ ಶಶಿಕುಮಾರ್ ತೋಟಕ್ಕೆ ನೀರಿನ ವ್ಯವಸ್ಥೆ ಮಾಡಿಕೊಟ್ಟರು. ದೇವಾಲಯದ ಇಒ ಶೀಲಾ ತೋಟದ ನಿರ್ವಹಣೆಗೆ ಸಿಬ್ಬಂದಿ ನೇಮಿಸಿದ್ದರು. ಕಲ್ಯಾಣಿ ಉಸ್ತುವಾರಿ ವಹಿಸಿಕೊಂಡಿರುವ ಸಿಬ್ಬಂದಿ

ಎಂ.ಬಿ.ನಾಗೇಶ್ ತೋಟದ ಬಗ್ಗೆ ಕಾಳಜಿ ವಹಿಸಿದ ಪರಿಣಾಮ ಇದೀಗ ಕಲ್ಯಾಣಿ ಸಮುಚ್ಚಯದಲ್ಲಿ ಈಗ ತುಳಸಿ ತೋಟ ನಳನಳಿಸುತ್ತಿದೆ.

ರಾಜ್ಯಪಾಲರಾಗಿದ್ದ ರಾಧಾಕೃಷ್ಣನ್ ಈಗ ಉಪರಾಷ್ಟ್ರಪತಿಯಾಗಿ ನ. 9ರಂದು ಮೇಲುಕೋಟೆಗೆ ಆಗಮಿಸುತ್ತಿರುವುದೇ ವಿಶೇಷವಾಗಿದೆ.