Shivananda Kanyanimani 
ಜಿಲ್ಲೆ

ಕುಲಪತಿ ಶಿವಾನಂದ ಕೆಳಗಿನಮನಿ ಅಧಿಕಾರ ಸ್ವೀಕಾರ

Raichur - Reporter - Rachhai Swamy

ರಾಯಚೂರು ಶ್ರೀ ಆದಿಕವಿ ಮಹರ್ಷಿ ವಿಶ್ವವಿದ್ಯಾಲಯದ ಎರಡನೇ ಕುಲಪತಿಯಾಗಿ ಶಿವಾನಂದ ಕೆಳಗಿನಮನಿ ಶನಿವಾರ ಅಧಿಕಾರ ಸ್ವೀಕಾರ ಮಾಡಿದರು.

ಈ ಮೊದಲು ವಿವಿಯ ಮೊದಲ ಕುಲಪತಿಯಾಗಿ ಅಧಿಕಾರ ವಹಿಸಿದ್ದ ಪ್ರೋ. ಹರೀಶ ರಾಮಸ್ವಾಮಿ 2024 ರ ನವೆಂಬರ್ 8 ರಂದು ನಿವೃತ್ತಿ ಹೊಂದಿದ ನಂತರ ವಿವಿಯ ಸೂಕ್ಷ್ಮ ಜೀವವಿಜ್ಞಾನ ವಿಭಾಗದ ಅಸೋಸಿಯೇಟ್ ಪ್ರೋ. ಡಾ. ಸುಯಮೀಂದ್ರ ಕುಲಕರ್ಣಿ ಅವರನ್ನು ಹಂಗಾಮಿ ಕುಲಪತಿಗಳನಾಗಿ ನೇಮಕ ಮಾಡಲಾಗಿತ್ತು.

ಇದೀಗ ಆದಿಕವಿ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾಲಯಕ್ಕೆ ಕುಲಪತಿಯಾಗಿ ಶಿವಮೊಗ್ಗ ಕುವೆಂಪು ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಪ್ರಾಧ್ಯಾಪಕ ಡಾ.ಶಿವಾನಂದ ಕೆಳಗಿನಮನಿ ಅವರನ್ನು ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಅವರ ಸೂಚನೆಯ ಮೇರೆಗೆ ರಾಜ್ಯಪಾಲರ ವಿಶೇಷ ಕಾರ್ಯದರ್ಶಿ ಆರ್ .ಪ್ರಭುಶಂಕರ್ ವರು ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ.