ಹುಬ್ಬಳ್ಳಿ: ಕನ್ನಡದ ಕವಯತ್ರಿ ವಿಭಾ ಅವರ ನೆನಪಿನಲ್ಲಿ "ವಿಭಾ ಸಾಹಿತ್ಯ ಪ್ರಶಸ್ತಿ- 2024'ಗಾಗಿ ಕನ್ನಡದ ಕವಿ/ಕವಯತ್ರಿಯರಿಂದ ಸ್ವರಚಿತ ಕವಿತೆಗಳ ಹಸ್ತಪ್ರತಿಗಳನ್ನು ಆಹ್ವಾನಿಸಲಾಗಿದೆ.
ಪ್ರಶಸ್ತಿಯು 10 ಸಾವಿರ ನಗದು ಮತ್ತು ಪ್ರಶಸ್ತಿ ಲಕ ಒಳಗೊಂಡಿದೆ. ಆಸಕ್ತರು, ತಮ್ಮ ಹೊಸ ಕವಿತೆಗಳ ಹಸ್ತಪ್ರತಿಯನ್ನು ಸ್ಪರ್ಧೆಗೆ ಕಳುಹಿಸಲು ವಿನಂತಿಸಲಾಗಿದೆ.
ಹಸ್ತಪ್ರತಿ ಹಿಂದಿರುಗಿಸುವುದಿಲ್ಲ. ಡಿಟಿಪಿ ಮಾಡಿದ ಅಥವಾ ಬರವಣಿಗೆ ಮಾಡಿದ ಹಸ್ತಪ್ರತಿ ಜೂನ್ 30ರೊಳಗೆ ಈ ಕೆಳಗಿನ ವಿಳಾಸಕ್ಕೆ ಕಳಿಸಲು ಕೋರಲಾಗಿದೆ.
ಸುನಂದಾ ಪ್ರಕಾಶ ಕಡಮೆ, ಸಂಚಾಲಕರು, ವಿಭಾ ಸಾಹಿತ್ಯ ಪ್ರಶಸ್ತಿ, ನಂ. 90, ನಾಗಸುಧೆ ಜಗಲಿ,
ಕಾಳಿದಾಸನಗರ, ವಿದ್ಯಾನಗರ, ಹುಬ್ಬಳ್ಳಿ& 580031.