ಮಂಗಳೂರು: ದೇವಳದ ಕಾಣಿಕೆ ಡಬ್ಬಿ ಹಾಗೂ ಮನೆಯಿಂದ ಬೈಕ್ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶ್ವಹಿಂದು ಪರಿಷತ್-ಬಜರಂಗದಳ ಉಳ್ಳಾಲ ಗ್ರಾಮಾಂತರ ಪ್ರಖಂಡ ಸಂಚಾಲಕ ಮೊಂಟೆಪದವು ನಿವಾಸಿ ತಾರಾನಾಥ್ ಮೋಹನ್ ಎಂಬುವನನ್ನು ಪೊಲೀಸರು ಬಂಧಿಸಿದ್ದಾರೆ.
ಈತ ಮಂಜನಾಡಿ ದೇವಸ್ಥಾನದಿಂದ ಕಾಣಿಕೆ ಡಬ್ಬಿ ಹಾಗೂ ಮೊಂಟೆಪದವು ಬಳಿಯ ಮೆನೆಯೊಂದರಿಂದ ಬೈಕ್ ಕಳವು ಮಾಡಿದ್ದ. ಈ ಕುರಿತ ದೃಶ್ಯಾವಳಿಗಳು ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಅದೇ ಮಾಹಿತಿ ಆಧಾರದಲ್ಲಿ ಸಾರ್ವಜನಿಕರು ಆತನನ್ನು ಹಿಡಿದು ಕೊಣಾಜೆ ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ.