ಜಿಲ್ಲೆ

5ಲಕ್ಷ‌ ಮನೆಗಳಿಗೆ ಶ್ರೀರಾಮನ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮ ಆಮಂತ್ರಣ ಕಳಶ ಪ್ರತಿ

ಮಂಜುನಾಥ ಕೋಳಿಗುಡ್ಡ

ವಿಶ್ವ ಹಿಂದು‌ಪರಿಷತ್ ಮುಖಂಡ ಕೃಷ್ಣ ಭಟ್ ಮಾಹಿತಿ

ಬೆಳಗಾವಿ: ಉತ್ತರ‌ ಪ್ರದೇಶದ ಅಯೋಧ್ಯೆಯಲ್ಲಿ ಹೊಸದಾಗಿ ನಿರ್ಮಿಸಿದ ರಾಮ ಮಂದಿರದಲ್ಲಿ 2024ರ ಜ‌.22ರಂದು ಶ್ರೀರಾಮನ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮ ನಡೆಯಲಿದೆ. ಇದರ ಅಂಗವಾಗಿ ರಾಮ ಜನ್ಮಭೂಮಿಯಿಂದ ತಂದಿರುವ ಆಮಂತ್ರಣ ಕಳಶ ಪ್ರತಿಯನ್ನು ಜಿಲ್ಲೆಯಲ್ಲಿ 5 ಲಕ್ಷ ಮನೆಗಳಿಗೆ ತಲುಪಿಸುವ ಯೋಜನೆ ಹಾಕಿಕೊಳ್ಳಲಾಗಿದೆ ಎಂದು ವಿಶ್ವ ಹಿಂದೂ ಪರಿಷತ್ ಮುಖಂಡ ಕೃಷ್ಣಭಟ್ ಹೇಳಿದರು.

ಜ.1ರಿಂದ 15ರವರೆಗೆ ಜಿಲ್ಲೆಯಲ್ಲಿ ಅಭಿಯಾನದ ರೂಪದಲ್ಲಿ ಆಮಂತ್ರಣ ಕಳಶ ಪ್ರತಿ ಹಾಗೂ ರಾಮನ ಭಾವಚಿತ್ರ ವಿತರಿಸಲಾಗುವುದು. 22ರಂದು ಎಲ್ಲ ದೇವಸ್ಥಾನಗಳಲ್ಲಿ ಪೂಜೆ, ಆರಾಧನೆ, ಭಜನೆ, ರಾಮನ ಆದರ್ಶ ಸಾರುವ ಪ್ರವಚನ ಕಾರ್ಯಕ್ರಮ ಹಮ್ಮಿಕೊಳ್ಳಬೇಕು. ಮನೆಗಳಲ್ಲಿ ಐದು ದೀಪ ಬೆಳಗಿಸಿ ಮತ್ತು ರಂಗೋಲಿ ಬಿಡಿಸಿ, ತಾವಿದ್ದ ಸ್ಥಳದಿಂದಲೇ ಮೂರ್ತಿ ಪ್ರತಿಷ್ಠಾಪನೆಯ ನೇಪ್ರಸಾರ ವೀಕ್ಷಿಸಬೇಕೆಂದು ಕೋರಲಾಗುವುದು’ ಎಂದರು.

ದತ್ತು ನಾಯಿಕ, ಬಿಟ್ಟಪ್ಪ ನಾಯಿಕ, ಗಣೇಶ ಚೌಗುಲೆ, ಉಮೇಶ ಚಂಡಕ, ಭಾವುಕನ್ನಾ ಲೋಹಾರ, ಸಂತೋಷ ಮಾದಿಗರ, ಆದಿನಾಥ ಗಾವಡೆ ಇತರರಿದ್ದರು.