ಜಿಲ್ಲೆ

ನವನಗರದಲ್ಲಿ ವಿಎಚ್ ಪಿ ಸ್ಥಾಪನಾ ದಿನ

Dharwada - Basavaraj Idli

ಹುಬ್ಬಳ್ಳಿ: ವಿಶ್ವ ಹಿಂದು ಪರಿಷತ್ ನವನಗರ ಪ್ರಖಂಡ ಆಶ್ರಯದಲ್ಲಿ ವಿಎಚ್ ಪಿ ಸ್ಥಾಪನಾ ದಿನ ಹಾಗೂ ಷಷ್ಠಿಪೂರ್ತಿ ಸಮಾರಂಭವನ್ನು ಆ. 31ರಂದು ಸಂಜೆ 6.15ಕ್ಕೆ ನವನಗರದ ಬಸವಾ ಎಸ್ಟೇಟ್ ಶ್ರೀರಾಮ ಸಮುದಾಯ ಭವನದಲ್ಲಿ ಏರ್ಪಡಿಸಲಾಗಿದೆ.

ಹಳೇಹುಬ್ಬಳ್ಳಿ ಶ್ರೀನಿಲಕಂಠೇಶ್ವರ ಮಠದ ಶ್ರೀ ಶಿವಶಂಕರ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸುವರು.

ಹನುಮಂತಪ್ಪ ಕೊರವರ, ಸುಭಾಸಸಿಂಗ್ ಜಮಾದಾರ ಅತಿಥಿಗಳಾಗಿ ಪಾಲ್ಗೊಳ್ಳುವರು ಎಂದು ನವನಗರ ಪ್ರಖಂಡದ ಅಧ್ಯಕ್ಷ ಪವನ್ ಮುದುಗಲ್, ಕಾರ್ಯದರ್ಶಿ ಸಚಿನ್ ಪಾಟೀಲ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.