ಜಿಲ್ಲೆ

ವಿಡಿಯೊ ಪ್ರಕರಣ ಲವ್​ ಜಿಹಾದ್​ ಷಡ್ಯಂತ್ರ: ಶರಣ್​ ಪಂಪ್​ವೆಲ್​

ಗೋಪಾಲಕೃಷ್ಣ ಪಾದೂರ್

ಉಡುಪಿ: ಖಾಸಗಿ ಪ್ಯಾರ ಮೆಡಿಕಲ್​ ಕಾಲೇಜಿನ ಶೌಚಾಲಯದಲ್ಲಿ ಮೂವರು ಮುಸ್ಲಿಂ ವಿದ್ಯಾರ್ಥಿನಿಯರು ಹಿಂದು ವಿದ್ಯಾರ್ಥಿನಿಯ ನಗ್ನ ವಿಡಿಯೋ ಚಿತ್ರೀಕರಣ ಪ್ರಕರಣದಲ್ಲಿ ಲವ್​ ಜಿಹಾದ್​ ಷಡ್ಯಂತ್ರ ಅಡಗಿದೆ. ಹಿಂದೂ ಹೆಣ್ಮಕ್ಕಳನ್ನು ಇಸ್ಲಾಂಗೆ ಮತಾಂತರ ಮಾಡುವ ವ್ಯವಸ್ಥಿತ ಸಂಚು ನಡೆಯುತ್ತಿದೆ ಎಂದು ವಿಹಿಂಪ ಪ್ರಾಂತ ಸಹ ಕಾರ್ಯದರ್ಶಿ ಶರಣ್​ ಪಂಪವೆಲ್​ ಹೇಳಿದ್ದಾರೆ.

ಗುರುವಾರ ರಾಜಾಂಗಣದ ಪಾರ್ಕಿಂಗ್​ ಪ್ರದೇಶದಲ್ಲಿ ಭಜರಂಗದಳ ಮತ್ತು ವಿಶ್ವ ಹಿಂದೂ ಪರಿಷತ್​ ವತಿಯಿಂದ ನಡೆದ ಪ್ರತಿಭಟನಾ ಸಭೆಯಲ್ಲಿ ಅವರು ಮಾತನಾಡಿದರು.

ಕೇರಳ ಸ್ಟೋರಿ ಸಿನೆಮಾದ ನೈಜ ಟನೆ ಉಡುಪಿಯಲ್ಲಿ ನಡೆದಿದೆ. ಪೊಲೀಸರು ಸೆಕ್ಷನ್​ 354 ಪ್ರಕಾರ ಎ್​ಐಅರ್​ ದಾಖಲಿಸದೆ ಕಾಲೇಜು ಅಡಳಿತ ಮಂಡಳಿ ಹೇಳಿದ್ದನ್ನು ಕೇಳಿ ಸುಮ್ಮನಾಗಿದ್ದಾರೆ. ಮುಂದೆ ಯಾವುದೇ ಕಾಲೇಜಿನಲ್ಲಿ ಇಂಥ ಟನೆ ನಡೆದರೆ ಹಿಂದೂ ಸಮಾಜ ಒಗ್ಗಟ್ಟಾಗಿ ಕಾಲೇಜಿಗೆ ಬೀಗ ಜಡಿಯುವ ಕೆಲಸ ಮಾಡಲಿದೆ ಎಂದರು.

6 ತಿಂಗಳಿನಿಂದ ನಡೆಯುತ್ತಿದೆ

6 ತಿಂಗಳ ಹಿಂದೆ ಇದೇ ಕಾಲೇಜಿನ ಶಿಕ್ಷಕಿ, ಈ ಕಾಲೇಜಿನ ಗೇಟ್​ ಬಳಿ ಹೊರಗಿನ ಮುಸ್ಲಿಂ ಯುವಕರು ಬಂದು ತಮ್ಮ ಕಾಲೇಜಿನ ಮುಸ್ಲಿಂ ಯುವತಿಯರೊಂದಿಗೆ ಮಾತನಾಡುತ್ತಾ ಮೊಬೈಲ್​ ಗಳನ್ನು ಎಕ್ಸ್​ ಚೇಂಚ್​ ಮಾಡಿಕೊಳ್ಳುವುದು, ವಿಡಿಯೋ ಹಂಚುವುದರ ಬಗ್ಗೆ ಕಾಲೇಜ್​ ಆಡಳಿತ ಮಂಡಳಿಯ ಗಮನಕ್ಕೆ ತಂದಿದ್ದರು. ಆದರೆ ಸಂಸ್ಥೆ ಯಾವುದೇ ಕ್ರಮ ಕೈಗೊಳ್ಳದಿದ್ದಾಗ ಅವರೇ ಶಿಕ್ಷಣ ಸಂಸ್ಥೆಯನ್ನು ತ್ಯಜಿಸಿದ್ದಾರೆ ಎಂದರು.

ಸಾಮಾಜಿಕ ಕಾರ್ಯಕರ್ತೆ ರಶ್ಮಿ ಸಮಂತ್​ ಮಾತನಾಡಿ, ಉಡುಪಿ ಟನೆ ದೇಶಕ್ಕೆ ಹೊಸತಲ್ಲ. ಇದೇ ಮಾದರಿ ಟನೆ 1992ರಲ್ಲಿ ಅಜ್ಮೀರಿನಲ್ಲಿ ನಡೆದಿತ್ತು. ಹಿಂದೂ ಹೆಣ್ಮಕ್ಕಳ ನಗ್ನ ಭಾವಚಿತ್ರ ಇಟ್ಟುಕೊಂಡು ಅನೈತಿಕ ಚಟುವಟಿಕೆ ನಡೆಸಲಾಗಿತ್ತು. ಹಿಂದೂಗಳ ವಿಷಯದಲ್ಲಿ ಸರ್ಕಾರ, ಮಾಧ್ಯಮ ರ್ನಿಲಕ್ಷ$್ಯ ವಹಿಸುತ್ತದೆ. ಹಿಂದೂ ಮಹಿಳೆಯರಿಗೂ ಸಮಾನ ಹಕ್ಕುಗಳಿಲ್ಲವೇ ಎಂದು ಪ್ರಶ್ನಿಸಿದರು.
ಮಹಿಳೆಯ ಕಳೆದುಹೋದ ನತೆಯನ್ನು ವಾಪಾಸು ನೀಡಲು ಸಾಧ್ಯವಿಲ್ಲ. ಜೀವನ ಪೂರ್ತಿ ಆಕೆಯ ಮನಸ್ಸಿನಿಂದ ಟನೆ ಮಾಸಿಹೋಗುವುದಿಲ್ಲ. ಹೀಗಾಗಿ ಇನ್ನುಮುಂದೆ ಇಂಥ ಟನೆಗಳು ನಮ್ಮ ಮಕ್ಕಳ ಜೊತೆಗೆ ನಡೆಯಬಾರದು ಎಂದು ಹೇಳಿದರು.

ವೇದಿಕೆಯಲ್ಲಿ ಬಜರಂಗದಳ ಪ್ರಾಂತ ಸಂಯೋಜಕ ಸುನೀಲ್​ ಕೆ.ಆರ್​, ಹಿಂ.ಜಾ.ವೇ ಪ್ರಾಂತ ಮುಖಂಡ ಕಿಶೋರ್​, ವಿಶ್ವಹಿಂದೂ ಪರಿಷತ್​ ಜಿಲ್ಲಾಧ್ಯಕ್ಷ ವಿಷ್ಣುಮೂರ್ತಿ ಆಚಾರ್ಯ, ಎಬಿವಿಪಿ ಮುಖಂಡ ಹರ್ಷಿತ್​ ಕೊಯಿಲ ಉಪಸ್ಥಿತರಿದ್ದರು.