ಬೆಂಗಳೂರು: ಮಹಿಳೆಯರು, ಮಕ್ಕಳು, ಯುವಕರು, ಉದ್ಯಮಿಗಳು, ಹಿರಿಯ ನಾಗರಿಕರು, ಅಸಂಘಟಿತ ಕಾರ್ವಿುಕರು ಸೇರಿ ದೇಶದ ಎಲ್ಲರ ಕಲ್ಯಾಣಕ್ಕಾಗಿ ಪ್ರಧಾನಿ ನರೇಂದ್ರ ಮೋದಿಯವರು ಘೋಷಿಸಿರುವ ಯೋಜನೆಗಳನ್ನು ಜನರಿಗೆ ಮುಟ್ಟಿಸಲು ಪ್ರಧಾನಮಂತ್ರಿ ಜನಕಲ್ಯಾಣ ಯೋಜನೆ ಪ್ರಸಾರ ಪ್ರಚಾರ ಅಭಿಯಾನ (ಪಿಎಂಜೆಕೆವೈಪಿಪಿಎ) ಕಾರ್ಯನಿರ್ವಹಿಸುತ್ತಿದೆ.
2014ರಲ್ಲಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದಾಗಿ ನಿಂದಲೂ ಪ್ರಧಾನಿ ಮೋದಿ ಯವರು 180ಕ್ಕೂ ಹೆಚ್ಚು ಯೋಜನೆಗಳನ್ನು ಘೋಷಿಸಿದ್ದಾರೆ. ಈ ಪೈಕಿ ಕೆಲವು ರಾಜ್ಯ ಸರ್ಕಾರಗಳೊಂದಿಗೆ ಒಡಂಬಡಿಕೆ, ಒಪ್ಪಂದ, ಅವಶ್ಯಕತೆಗೆ ಅನುಗುಣವಾಗಿ ಯೋಜನೆಗಳು ಜಾರಿ ಯಲ್ಲಿವೆ. ಆದರೆ ಅನೇಕ ಯೋಜನೆಗಳ ಬಗ್ಗೆ ಜನರಿಗೆ ಮಾಹಿತಿ ಇಲ್ಲದೆ ನಿಜವಾದ ಫಲಾನುಭವಿಗಳನ್ನು ತಲುಪಲು ಸಾಧ್ಯವಾಗುವುದಿಲ್ಲ. ಯೋಜನೆಯ ಉದ್ದೇಶ ಇದರಿಂದ ಅಪೂರ್ಣವಾಗುತ್ತದೆ. ಇದಕ್ಕೆ ಪರಿಹಾರವಾಗಿ ರಾಷ್ಟ್ರೀಯ ಮಟ್ಟದಲ್ಲಿ ಪಿಎಂಜೆಕೆವೈಪಿಪಿಎ ಸರ್ಕಾರೇತರ ಸಂಸ್ಥೆಯನ್ನು ಸ್ಥಾಪಿಸಲಾಗಿದ್ದು, ದೇಶಾದ್ಯಂತ 27 ರಾಜ್ಯಗಳಲ್ಲಿ ಕಾರ್ಯನಿರ್ವಹಿಸುತ್ತಿದೆ.
ಪ್ರತಿ ಫಲಾನುಭವಿಗೆ ಲಾಭ: ಪ್ರಧಾನಮಂತ್ರಿ ಯೋಜನೆಗಳ ಕುರಿತು ಕರ್ನಾಟಕದ ಎಲ್ಲ ಜನರಿಗೆ ವಿವರಗಳು, ಬೆಂಬಲ ಹಾಗೂ ಸಹಾಯ ನೀಡಲು ಸರ್ಕಾರೇತರ ಸಂಸ್ಥೆಯಾಗಿ ಪಿಎಂಜೆಕೆವೈಪಿಪಿಎ
ರಾಜ್ಯ ಘಟಕವನ್ನು ಸ್ಥಾಪಿಸಲಾಗಿದೆ. ಸಾಮಾಜಿಕ ಕಾರ್ಯಕರ್ತೆ ಅಮಿತಾ ಪಾಂಡೆ ರಾಜ್ಯ ಘಟಕದ ಅಧ್ಯಕ್ಷೆಯಾಗಿ ನಿಯೋಜಿತರಾಗಿದ್ದಾರೆ. ರಾಜ್ಯದ ಎಲ್ಲ ಜಿಲ್ಲೆಗಳಿಗೆ ಅಧ್ಯಕ್ಷರು ಹಾಗೂ ಪ್ರತಿ ಜಿಲ್ಲಾ ಘಟಕಕ್ಕೆ 8-10 ಪದಾಧಿಕಾರಿಗಳು ಸೇರಿ ಅಂದಾಜು 350 ಜನರ ಸದೃಢ ತಂಡ ಕಟ್ಟಲು ಪಾಂಡೆ ಮುಂದಾಗಿದ್ದಾರೆ. ಈಗಾಗಲೆ 8 ಜಿಲ್ಲಾಧ್ಯಕ್ಷರು ಸೇರಿ 40 ಜನರ ನೇಮಕವಾಗಿದೆ.
ಈ ಕುರಿತು ಪ್ರತಿಕ್ರಿಯಿಸಿದ ಅಮಿತಾ ಪಾಂಡೆ, ಪ್ರಧಾನಮಂತ್ರಿಯವರ ಅನೇಕ ಯೋಜನೆಗಳ ಬಗ್ಗೆ ಜನರಿಗೆ ಮಾಹಿತಿ ಇಲ್ಲ. ಮಾಹಿತಿ ಇದ್ದರೂ ಅದರ ಲಾಭ ಪಡೆಯುವ ಮಾರ್ಗ ತಿಳಿದಿಲ್ಲ. ಈ ವಿಧಾನವನ್ನು ನಾವು ಜನರಿಗೆ ಸಾಮಾಜಿಕ ಜಾಲತಾಣ, ಮಾಧ್ಯಮದ ಮೂಲಕ ತಿಳಿಸುತ್ತೇವೆ. ನಮ್ಮನ್ನು ನೇರವಾಗಿ ಸಂರ್ಪಸುವವರಿಗೂ ಈ ಬಗ್ಗೆ ಮಾಹಿತಿ ಹಾಗೂ ಮಾರ್ಗದರ್ಶನ ನೀಡುತ್ತೇವೆ. ದೇಶದ ಎಲ್ಲ ಜನರಿಗೆ ಸರ್ಕಾರದ ಯೋಜನೆಯ ಲಾಭ ತಲುಪಿಸುವುದೇ ನಮ್ಮ ಉದ್ದೇಶ ಎಂದು ತಿಳಿಸಿದ್ದಾರೆ.