ಜಿಲ್ಲೆ

ವಚನಗಳು ಮಾನವೀಯ ಮೌಲ್ಯಗಳ ಆಗರ

ಗಿರೀಶ ಸಗರ

ವಿಜಯಪುರ:ಮುಂಬರುವ ತಿಂಗಳಿನಲ್ಲಿ ಬಸವನಬಾಗೇವಾಡಿ ಪಟ್ಟಣದಿಂದ ಪ್ರಾರಂಭವಾಗಲಿರುವ ಬಸವ ಸಂಸತಿ ಅಭಿಯಾನ ನಾಡಿನಾದ್ಯಂತ ಸಂಚರಿಸಲಿದ್ದು, ಜಿಲ್ಲೆಯ ಎಲ್ಲ ನಾಗರಿಕರು ಅದರಲ್ಲಿ ಭಾಗವಹಿಸುವಂತೆ ಕಸಾಪ ಗೌರವ ಅಧ್ಯಕ್ಷೆ ಭಾರತಿ ಪಾಟೀಲ ಕರೆ ನೀಡಿದರು.ನಗರದ ಕಸಾಪ ಸಭಾಂಗಣದಲ್ಲಿ ಜಿಲ್ಲೆ, ತಾಲೂಕು ಹಾಗೂ ಕಸಾಪ ನಗರ ಟಕಗಳ ಸಂಯುಕ್ತಾಶ್ರಯದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಬಸವ ಸಂಸತಿ ಅಭಿಯಾನದ ಕವಿ ಗೋಷ್ಠಿ ಉದ್ಘಾಟಿಸಿ ಮಾತನಾಡಿದ ಅವರು, ಬಸವಾದಿ ಶರಣರ ವಚನಗಳು ಮಾನವೀಯ ಮೌಲ್ಯಗಳಿಂದ ಕೂಡಿವೆ. ಸತ್ಯ, ಅಂತರಂಗದ ಸೌಂದರ್ಯ, ಜೀವನದ ಶ್ರೇಷ್ಠ ವಿಧಾನಗಳು ಅದರಲ್ಲಿವೆ. ಬಸವಣ್ಣನವರು ಜಗತ್ತಿನ ಸಾಂಸತಿಕ ನಾಯಕರು.ಇಡೀ ವಿಶ್ವವೇ ಅವರ ವಚನಗಳನ್ನು ಸ್ವೀಕರಿಸಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ವಿಶ್ರಾಂತ ಮುಖ್ಯ ಗುರು ಸುಧಾಕರಗೌಡ ಬಿರಾದಾರ ಮಾತನಾಡಿ, ಬಸವಣ್ಣನವರ ವಚನ ಅರ್ಥಮಾಡಿಕೊಂಡು ಬದುಕು ಸಾಗಿಸಬೇಕು. ನಮ್ಮ ಜೀವನದಲ್ಲಿ ವಚನಗಳ ಪಾಲನೆ ಆಗಬೇಕು ಎಂದು ತಿಳಿಸಿದರು.ಮುಖ್ಯ ಅತಿಥಿ ಸಾಹಿತಿ ಮಡಿವಾಳಮ್ಮ ನಾಡಗೌಡ ಮಾತನಾಡಿ, ಬಸವಣ್ಣನವರು ಸಿಯರ ಮಹಿಳಾ ಧ್ವನಿಗೆ ಸ್ಫೂರ್ತಿಯಾದರು. ಕವಿಗಳು ಉತಷ್ಟ ಮತ್ತು ಗುಣಮಟ್ಟದ ಕವನ ವಾಚಿಸಿದ್ದು ಸಂತಸ. ಬಸವ ಸಂಸತಿ ನಮ್ಮೆಲ್ಲರ ಉಸಿರಾಗಬೇಕೆಂದು ಕರೆ ನೀಡಿದರು.

ಮುಖ್ಯ ಅತಿಥಿ ಸಂತೋಷ ಬಂಡೆ, ಭಾಗ್ಯಲಕ್ಷಿ$್ಮ ಭಗವಂತಗೌಡರ, ಪರವೀನ ಶೇಖ, ಮಮತಾ ಮುಳಸಾವಳಗಿ ಹಾಗೂ ಪಾರ್ವತಿ ಸೊನ್ನದ ಮಾತನಾಡಿದರು.ಕವಿಗೋಷ್ಟಿಯಲ್ಲಿ ರುದ್ರಮ್ಮ ಗಿಡ್ಡಪ್ಪಗೋಳ, ಶರಣಮ್ಮ ಹಾದಿಮನಿ, ವೈಶಾಲಿ ಬೀಳೂರ, ಶಿವಾಜಿ ಮೋರೆ, ಶೋಭಾ ಹರಿಜನ, ಶಾಂತಾ ಬಿರಾದಾರ, ಭಾರತಿ ಗೊಂಗಡಿ, ರೂಪಾ ರಜಪೂತ, ಸುಜಾತಾ ಹ್ಯಾಳದ, ಮಹಾದೇವಿ ವಾಲಿ ಕವನ ವಾಚಿಸಿದರು.ಜಯಶ್ರೀ ಹಿರೇಮಠ ಸ್ವಾಗತಿಸಿದರು. ಶಿಲ್ಪಾ ಭಸ್ಮೆ ನಿರೂಪಿಸಿದರು. ಡಾ. ಆನಂದ ಕುಲಕರ್ಣಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಶೋಭಾ ಬಡಿಗೇರ ವಂದಿಸಿದರು.

ಪ.ಪೂ. ಕಾಲೇಜು ಶಿಕ್ಷಣ ಇಲಾಖೆ ವಿಶ್ರಾಂತ ಉಪನಿರ್ದೇಶಕ ಎಸ್​.ಎಂ. ಕಣಬೂರ ಇತ್ತೀಚೆಗೆ ನಿಧನರಾದ ಮೌನಾಚರಣೆ ನಡೆಸಿ ಆತ್ಮಕ್ಕೆ ಶಾಂತಿ ಕೊರಲಾಯಿತು.ಕಸಾಪ ಜಿಲ್ಲಾಧ್ಯಕ್ಷ ಹಾಸಿಂಪೀರ ವಾಲಿಕಾರ, ಗೌರವ ಕೋಶಾಧ್ಯಕ್ಷ ಅಭಿಷೇಕ ಚಕ್ರವರ್ತಿ, ಮಾಜಿ ಕಸಾಪ ಅಧ್ಯಕ್ಷರ ಬಿ.ಎಂ. ಪಾಟೀಲ, ಬಿ.ಎಂ. ಅಜೂರ, ಲತಾ ಗುಂಡಿ, ಶಾಂತಾ ವಿಭೂತಿ, ರೇಖಾ ಕುಂಬಾರ, ಜಿ.ಎಸ್​. ಬಳ್ಳೂರ, ಅಹಮ್ಮದ ವಾಲಿಕಾರ, ಕೆ.ಎಸ್​. ಹಣಮಾಣಿ, ಹಣಮಂತಪ್ಪ ತೊದಲಬಾಗಿ, ಬಸವರಾಜ ಬಿರಾದಾರ, ಫಕ್ರುದ್ದೀನ ಹಿರೇಕೊಪ್ಪ, ಸಿದ್ದಯ್ಯ ಹಿರೇಮಠ, ಸೌಮ್ಯ ದೋರನಳ್ಳಿ, ಗಂಗಮಾ ರಡ್ಡಿ, ಕಲಾವತ್​ ಗುರವ, ಅಮೀನಸಾಬ ಬುರಾನಗೋಳ, ಶರಣಗೌಡ ಪಾಟೀಲ, ಅಮೋಸಿದ್ಧ ಪೂಜಾರಿ, ರಮೇಶ ಪೂಜಾರಿ ಮತ್ತಿತರರಿದ್ದರು.

ವಿಜಯಪುರದ ಕಸಾಪ ಸಭಾಂಗಣದಲ್ಲಿ ಬಸವ ಸಂಸತಿ ಅಭಿಯಾನದಡಿ ಹಮ್ಮಿಕೊಂಡಿದ್ದ ಕವಿ ಗೋಷ್ಠಿಯಲ್ಲಿ ಕವಿಗಳನ್ನು ಸನ್ಮಾನಿಸಲಾಯಿತು. ಭಾರತಿ ಪಾಟೀಲ, ಸುಧಾಕರಗೌಡ ಬಿರಾದಾರ, ಹಾಸಿಂಪೀರ ವಾಲಿಕಾರ ಮತ್ತಿತರರಿದ್ದಾರೆ.