ಸುಳ್ಯ: ಅಜ್ಜಾವರ ಗ್ರಾಮದ ಗೋರಡ್ಕದಿಂದ ಇರುವಂಬಳ್ಳಕ್ಕೆ ಸಂಪರ್ಕಿಸುವ ಕಾಲುಸೇತುವೆ ಶಿಥಿಲಗೊಂಡಿದ್ದು, ಮುರಿದು ಬೀಳುವ ಸ್ಥಿತಿಯಲ್ಲಿದೆ. ಈ ಹಿನ್ನೆಲೆಯಲ್ಲಿ ಸ್ಥಳೀಯರು ಎರಡೂ ಸ್ಥಳಗಳಿಗೆ ಸಂಪರ್ಕ ಕಡಿತಗೊಳ್ಳುವ ಬಗ್ಗೆ ಆತಂಕಗೊಂಡಿದ್ದಾರೆ. ಬಈ ಬಗ್ಗೆ ಸ್ಥಳೀಯರು ಅಜ್ಜಾವರ ಗ್ರಾಮ ಪಂಚಾಯಿತಿ ಮತ್ತು ಸುಳ್ಯ ತಹಸೀಲ್ದಾರರ ಗಮನಕ್ಕೆ ತಂದಿದ್ದು, ಸ್ಪಂದಿಸಿದ ತಹಸೀಲ್ದಾರ್ ಮಂಜುನಾಥ್ ಸ್ಥಳಕ್ಕೆ ಸುಳ್ಯ ಕಂದಾಯ ನಿರೀಕ್ಷಕ ಅವಿನ್ ರಂಗತ್ತಮಲೆ ಅವರನ್ನು ಕಳುಹಿಸಿ ಮಾಹಿತಿ ಸಂಗ್ರಹಿಸಿದ್ದಾರೆ. ಅಜ್ಜಾವರ ಗ್ರಾಮ ಲೆಕ್ಕಧಿಕಾರಿ ನಾರಾಯಣ, ಉಗ್ರಾಣಿ ಶಿವಣ್ಣ ಮಂಡೆಕೋಲು, ಪಂಚಾಯಿತಿ ಸಿಬ್ಬಂದಿ ಕಾರ್ತಿಕ್ ಮೊದಲಾದವರು ಇದ್ದರು.