ಜಿಲ್ಲೆ

ಪುಣಿಂಚಿತ್ತಾಯರ ಕೊಡುಗೆ ಪ್ರೇರಣೆ : ಸೀತಾರಾಮ ಕುಂಜತ್ತಾಯ ಅನಿಸಿಕೆ

ಮುಳ್ಳೇರಿಯ: ಶಿವಳ್ಳಿ ಬ್ರಾಹ್ಮಣ ಸಮಾಜ ಏತಡ್ಕ ವಲಯದ ನೇತೃತ್ವದಲ್ಲಿ ಮುನಿಯೂರು ಹರಿನಾರಾಯಣ ನಡುವಂತಿಲ್ಲಾಯರ ಮನೆಯಲ್ಲಿ ಡಾ.ಪುಂಡೂರು ವೆಂಕಟರಾಜ ಪುಣಿಂಚಿತ್ತಾಯರ ಜಯಂತಿ ಆಚರಿಸಲಾಯಿತು.

ಶಿವಳ್ಳಿ ಬ್ರಾಹ್ಮಣ ಸಮಾಜ ಕೇಂದ್ರ ಸಮಿತಿ ರಕ್ಷಾಧಿಕಾರಿ ಸೀತಾರಾಮ ಕುಂಜತ್ತಾಯ ಕಾರ್ಯಕ್ರಮ ಉದ್ಘಾಟಿಸಿ ಪುಣಿಂಚತ್ತಾಯರು ಮಾಡಿದ ಸಾಧನೆ ಸದಾ ಸ್ಮರಣೀಯ. ಅವರ ಅಹರ್ನಿಶಿ ಕೊಡುಗೆ ಹೊಸ ತಲೆಮಾರಿಗೆ ಪ್ರೇರಣೆಯಾಗಬೇಕು ಎಂದರು.

ಮುನಿಯೂರು ಶ್ರೀಧರ ನಡುವಂತಿಲ್ಲಾಯ, ವಿಜಯರಾಜ ಪುಣಿಂಚಿತ್ತಾಯ, ಶಿವಳ್ಳಿ ಬ್ರಾಹ್ಮಣ ಸಮಾಜ ಮಹಿಳಾ ಘಟಕದ ಅಧ್ಯಕ್ಷೆ ಪ್ರಭಾವತಿ ಕೆದಿಲಾಯ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು. ಅನಘ ಮತ್ತು ಆಶಿತ ಪ್ರಾರ್ಥನೆಗೈದರು. ಪುಣಿಂಚಿತ್ತಾಯರು ಬರೆದ ತುಳು ಹಾಡನ್ನು ಕೇಂದ್ರ ಸಮಿತಿ ಉಪಾಧ್ಯಕ್ಷೆ ಸೀತಾರತ್ನ ಪುಣಿಂಚಿತ್ತಾಯ, ಪ್ರಭಾವತಿ ಕೆದಿಲಾಯ, ನಳಿನಿ ಅನಲತ್ತಾಯ, ಕೇಂದ್ರ ಸಮಿತಿ ಕೋಶಾಧಿಕಾರಿ ಸೀಮಾ ಬಳ್ಳುಳ್ಳಾಯ ಹಾಡಿದರು. ಹರಿನಾರಾಯಣ ನಡುವಂತಿಲ್ಲಾಯ ಸ್ವಾಗತಿಸಿ, ಗೀತಾ ಕುಂಜತ್ತಾಯ ವಂದಿಸಿದರು. ಶಿವಳ್ಳಿ ಬ್ರಾಹ್ಮಣ ಸಮಾಜದ ಕೋಶಾಧಿಕಾರಿ ಪಾರ್ವತಿ ಕುಂಜತ್ತಾಯ ನಿರೂಪಿಸಿದರು.