ಜಿಲ್ಲೆ

ವೆಂಕಟದಾಸರ ಕೊಡುಗೆ ಅಪಾರ

Dharwada - Vikram Nadiger

ಧಾರವಾಡ: ಸಮಾಜಕ್ಕೆ ದಾಸ ಶ್ರೇಷ್ಠ ಬಾಗಲಕೋಟೆಯ ಶ್ರೀ ಪ್ರಸನ್ನ ವೆಂಕಟದಾಸರ ಕೊಡುಗೆ ಅಪಾರವಾಗಿದೆ. ಅವರ ಸಾಹಿತ್ಯದ ರುಚಿಯನ್ನು ಶ್ರೀ ಜಗನ್ನಾಥದಾಸರು ಕಾಕಂಬಿ ದಾಸರೆಂದು ಕೊಂಡಾಡಿದ್ದಾರೆ ಎಂದು ಗಾಯಕ ಡಾ. ಆರ್.ಪಿ. ಕುಲಕರ್ಣಿ ಹೇಳಿದರು.
ನಗರದಲ್ಲಿ ಮಂಗಳವಾರ ಏರ್ಪಡಿಸಿದ್ದ ಶ್ರೀ ಪ್ರಸನ್ನ ವೆಂಕಟದಾಸರ ಸ್ಮರಣೆ ಸಮಾರಂಭದಲ್ಲಿ ಮಾತನಾಡಿದ ಅವರು, ಪ್ರಸನ್ನ ವೆಂಕಟದಾಸರು ಭಗವಂತನ ಅನೇಕ ದೇವರ ನಾಮಗಳನ್ನು ರಚಿಸಿದ್ದಾರೆ. ತಿರುಪತಿ ತಿಮ್ಮಪ್ಪನನ್ನು ಸಾಕ್ಷಾತ್ಕಾರ ಮಾಡಿಕೊಂಡು ತಮ್ಮ ನಾಲಿಗೆ ಮೇಲೆ ಶ್ರೀ ಪ್ರಸನ್ನ ವೆಂಕಟ ಎಂಬ ನಾಮಾಂಕಿತ ಪಡೆದ ಮಹಾನುಭಾವರು ಎಂದರು.
ಸಂಜೆ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಏರ್ಪಡಿಸಿದ್ದ ಹರಿದಾಸ ವೈಭವ ಸಮಾರಂಭವನ್ನು ಶ್ರೀ ಸತ್ಯ ಪ್ರಮೋದ ಸಾಹಿತ್ಯ ಪ್ರತಿಷ್ಠಾನ ಅಧ್ಯಕ್ಷ ಎಸ್.ಬಿ. ಗುತ್ತಲ ಉದ್ಘಾಟಿಸಿದರು. ಬಳಿಕ ರಾಯಚೂರು ಶೇಷಗಿರಿ ದಾಸ ಅವರಿಂದ ದಾಸವಾಣಿ ಜರಗಿತು. ಹಾರ್ಮೋನಿಯಂನಲ್ಲಿ ಶ್ರೀಪಾದ ದಾಸ್, ತಬಲಾದಲ್ಲಿ ಗೋಪಾಲ ಗುಡಬಂಡೆ ಸಾಥ್ ನೀಡಿದರು. ಎನ್.ಆರ್. ಕುಲಕರ್ಣಿ, ಇತರರು ಇದ್ದರು.