ಬಸವನಬಾಗೇವಾಡಿ: ಕಾಯಕ ಮತ್ತು ದಾಸೋಹ ತತ್ವದಲ್ಲಿ ನಂಬಿಕೆ ಇಟ್ಟಿದ್ದ ವೇಮನ ತಾವು ಕಂಡ ಸತ್ಯವನ್ನು ಹಾಡಿ, ಜನರಲ್ಲಿ ಅರಿವಿನ ಬೀಜ ಬಿತ್ತಿದ್ದಾರೆ ಎಂದು ರಾಷ್ಟ್ರೀಯ ಬಸವಸೈನ್ಯ ಸಂಸ್ಥಾಪಕಾಧ್ಯ ಶಂಕರಗೌಡ ಬಿರಾದಾರ ಹೇಳಿದರು.
ಪಟ್ಟಣದ ತಹಸೀಲ್ದಾರ್ ಕಚೇರಿಯಲ್ಲಿ ತಾಲೂಕಾಡಳಿತದಿಂದ ಭಾನುವಾರ ಆಚರಿಸಿದ ವೇಮನ ಜಯಂತಿಯಲ್ಲಿ ಮಾತನಾಡಿದ ಅವರು, ದಾರ್ಶನಿಕರಾಗಿದ್ದ ವೇಮನ ಸಮಾಜದಲ್ಲಿನ ಮೌಢ್ಯ, ಅನಿಷ್ಟ ಪದ್ಧತಿ ಹೋಗಲಾಡಿಸಲು ನಿರಂತರ ಶ್ರಮಿಸಿದ್ದರು ಎಂದು ಸ್ಮರಿಸಿದರು.
ಉಪತಹಸೀಲ್ದಾರ್ ಬೋರಮ್ಮ ಪೊಲೆಸಿ, ನ್ಯಾಯವಾದಿಗಳ ಸಂದ ಅಧ್ಯ ಎಸ್.ಎಂ.ಗುರಡ್ಡಿ, ರವಿ ಚಿಕ್ಕೊಂಡ, ಸಂಕನಗೌಡ ಪಾಟೀಲ, ಸಂಗಮೇಶ ಹುಜರತಿ,್ತ ಪ್ರಭು ಪಾಟೀಲ, ಬಸವರಾಜ ದಾನಿ, ಶಿವಾನಂದ ತೋಳನೂರ, ಎ.ಟಿ. ಪಾಟೀಲ, ಶಂಕರ ತಳವಾರ, ಆರ್.ವಿ.ಘಾಟಗೆ, ನಿರ್ಮಲಾ ಪೂಜಾರಿ, ಎಸ್.ಬಿ.ಕುಂಬಾರ ಉಪಸ್ಥಿತರಿದ್ದರು. ಮಂಜುನಾಥ ಹಳ್ಳೂರ ಸ್ವಾಗತಿಸಿದರು. ವಿರೇಶ ಗುಡ್ಲಮನಿ ನಿರೂಪಿಸಿದರು.