filter: 0; jpegRotation: 0; fileterIntensity: 0.000000; filterMask: 0; 
ಜಿಲ್ಲೆ

ವೇಮನ ಜಯಂತಿ ಆಚರಣೆಯಲ್ಲಿ ಲೋಪ

ರಾಘವೇಂದ್ರಗೌಡ ಭೀ ಪಾಟೀಲ್

ರಾಮದುರ್ಗ: ಮಹಾಯೋಗಿ ವೇಮನ ಜಯಂತಿ ಆಚರಣೆ ಮಾಡುವಲ್ಲಿ ತಾಲೂಕಾಡಳಿತ ನಿರ್ಲಕ್ಷ್ಯ ಧೋರಣೆ ತಾಳಿದೆ ಎಂದು ಆರೋಪಿಸಿ ತಾಲೂಕು ರಡ್ಡಿ ಸಮುದಾಯದ ನೇತತ್ವದಲ್ಲಿ ಮುಖಂಡರು ಮಿನಿ ವಿಧಾನಸೌಧದ ಎದುರು ಪ್ರತಿಭಟನೆ ನಡೆಸಿದರು.

ಸರ್ಕಾರಿ ಕಚೇರಿಗಳಲ್ಲಿ ಮಹಾಯೋಗಿ ವೇಮನ ಜಯಂತಿ ಆಚರಿಸುವಂತೆ ಸರ್ಕಾರದ ಆದೇಶವಿದ್ದರೂ ಪಾಲನೆಯಾಗಿಲ್ಲ. ತಹಸೀಲ್ದಾರ್ ಅನುಪಸ್ಥಿತಿಯಲ್ಲಿ ಜಯಂತಿ ಆಚರಿಸಲಾಗಿದೆ. ಕಾಟಾಚಾರಕ್ಕೆ ಜಯಂತಿ ಆಚರಿಸುವ ಮೂಲಕ ವೇಮನರಿಗೆ ಅವಮಾನ ಮಾಡಿದ್ದಾರೆ ಎಂದು ಆರೋಪಿಸಿದರು.

ಜಿಲ್ಲಾಧಿಕಾರಿಗಳೊಂದಿಗೆ ಸಮುದಾಯದ ಮುಖಂಡರು ಮಾತನಾಡಿ, ಇಲ್ಲಿನ ಅವ್ಯವಸ್ಥೆ ಕುರಿತು ಗಮನಕ್ಕೆ ತಂದಾಗ ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.

ನಂತರ ಕಚೇರಿಯಿಂದ ತೆರಳಿದ ಮುಖಂಡರು, ತಾಲೂಕಿನ ವಿವಿಧ ಇಲಾಖೆಗಳಿಗೆ ಭೇಟಿ ನೀಡಿದಾಗ ಜಯಂತಿ ಆಚರಿಸದಿರುವ ಸಂಗತಿ ತಿಳಿದು ಬಂದಿತು. ಕೂಡಲೇ ಸರ್ಕಾರ ತಪ್ಪಿತಸ್ಥ ಅಧಿಕಾರಿಗಳ ಮೇಲೆ ಕ್ರಮವಹಿಸಬೇಕು. ಇಲ್ಲದಿದ್ದರೆ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದರು.

ರಡ್ಡಿ ಸಮುದಾಯದ ಅಧ್ಯಕ್ಷ ಜೆ.ಬಿ. ಮೇಲಪ್ಪಗೋಳ, ಮುಖಂಡರಾದ ಡಾ.ಕೆ.ವಿ. ಪಾಟೀಲ, ರವಿ ಗಲಬಿ. ವೆಂಕಣ್ಣ ಮುಧೋಳ, ಗೋಪಾಲರಡ್ಡಿ ಸಂಶಿ, ಪ್ರಕಾಶ ಚವಲಿ, ಪ್ರವೀಣ ನಂದೆಪ್ಪನವರ, ಪಡಿಯನಗೌಡ ಪಾಟೀಲ, ಸುನೀತಾ ತಿಮ್ಮನಗೌಡ್ರ, ಕಷ್ಣಗೌಡ ಪಾಟೀಲ, ಬಾಬುರಡ್ಡಿ ಹೆಬ್ಬಳ್ಳಿ, ಎಸ್.ಜಿ. ಬಿರಾದಾರ ಪಾಟೀಲ, ಶ್ರೀನಿವಾಸ ದ್ಯಾವಣ್ಣವರ, ಈರನಗೌಡ ಪಾಟೀಲ, ಹನುಮಂತ ಹಂಚಿನಾಳ ಇತರರಿದ್ದರು.