ಜಿಲ್ಲೆ

ವೇಮಗಲ್ ಸಂಘಕ್ಕೆ 12 ಮಂದಿ ಆಯ್ಕೆ

ವೇಮಗಲ್​: ವೇಮಗಲ್​ ವಿವಿಧೋದ್ದೇಶ ಪ್ರಾಥಮಿಕ ಕೃಷಿ ಸಹಕಾರ ಸಂಘಕ್ಕೆ ಶನಿವಾರ ನಿಗದಿಯಾಗಿದ್ದ ನಿರ್ದೇಶಕ ಸ್ಥಾನದ ಚುನಾವಣೆಯಲ್ಲಿ ಸಾಲಗಾರರ ಕ್ಷೇತ್ರದ ವಿ.ನಂಜುಂಡಗೌಡ (ನಾಗೇಶ್​) 478, ಎಂ.ವಿ.ಚೌಡರೆಡ್ಡಿ 426, ಎಸ್​. ದೇವರಾಜು 386, ಬಿ.ಎಸ್​.ವಿಶ್ವನಾಥ 403, ಶಂಕರಪ್ಪ 406, ಕೆ.ಸಿ.ಮಂಜುನಾಥ 447,ಜಯಲಕ್ಷ್ಮಮ್ಮ 395, ಶೈಲಜಾ 437, ಸದಾನಂದ 459, ವಿ.ಪಿ. ರವಿಕುಮಾರ್​ 389, ಬಿ.ಎ.ಮಂಜುನಾಥ 494, ಸಾಲಗಾರರಲ್ಲದ ಕ್ಷೇತ್ರದ ಕೆ.ಅಶೋಕ್​ 480 ಮತ ಪಡೆದು ಭರ್ಜರಿ ಗೆಲುವು ಸಾಧಿಸಿದ್ದಾರೆ.

ಡಿ.23ರಂದು ಸಂಕ್ಕೆ ಅವಿರೋಧ ಆಯ್ಕೆ ಮಾಡಬೇಕು ಎಂದು ಮುಖಂಡರಾದ ಜೆಡಿಎಸ್​ ಪರಾಜಿತ ಅಭ್ಯರ್ಥಿ ಸಿಎಂಆರ್​ ಶ್ರೀನಾಥ್​, ಬೆಗ್ಲಿ ಸೂರ್ಯ ಪ್ರಕಾಶ್​, ನಾಗನಾಳ ಸೋಮಣ್ಣ ಹಲವರು ನಾಮಪತ್ರ ಸಲ್ಲಿಸಿದ ಪ್ರತಿಯೊಬ್ಬ ಅಭ್ಯರ್ಥಿಗಳನ್ನು ಕರೆಸಿ ಹಿಂಪಡೆಯುವಂತೆ ಪತ್ರಗಳಿಗೆ ಸಹಿ ಹಾಕಿಸಿ, ದೀರ್ಘಕಾಲ ಚರ್ಚೆ ಮಾಡಿ ಒಪ್ಪಿಸಲಾಗಿತ್ತು. ಕಾಂಗ್ರೆಸ್​, ಬಿಜೆಪಿ, ಜೆಡಿಎಸ್​ಗಳಿಗೆ ಸಮಾನವಾಗಿ ನಾಲ್ಕು ನಾಲ್ಕು ಸ್ಥಾನಗಳನ್ನು ಹಂಚಲು ತೀಮಾರ್ನಿಸಿದ್ದು, ಇದಕ್ಕೆ ಪ್ರತಿಯೊಬ್ಬರೂ ಒಪ್ಪಿಗೆ ನೀಡಿದ್ದರು. ಆದರೆ, ಕೊನೆಯಲ್ಲಿ ಆಯಾ ಪಕ್ಷಗಳ ಸದಸ್ಯರನ್ನು ಗುರುತಿಸಿ ಪಟ್ಟಿ ಘೋಷಣೆ ಮಾಡಿದಾಗ, ನೀವು ನಿರ್ಧಾರ ಮಾಡಿ ಘೋಷಣೆ ಮಾಡಿರುವ ಅಭ್ಯರ್ಥಿಗಳು ನಮಗೆ ಸಂಮತವಿಲ್ಲ ಆಯ್ಕೆಯಾದವರನ್ನೇ ಮತ್ತೆ ಆಯ್ಕೆ ಮಾಡಿದ್ದೀರಿ, ಚುನಾವಣೆಯೇ ನಡೆಯಲಿ ಎಂದು ಮುಖಂಡರುಗಳ ಮೇಲೆ ಕೂಗಾಡಿ ಅಭ್ಯರ್ಥಿಗಳು ಹೊರಟು ಹೋಗಿದ್ದರು.

ಆದರೆ, ಮತದಾನದ ದಿನ ಯಾವುದೇ ಕಾವು ಕಾಣಲಿಲ್ಲ, ಮುಖಂಡರು ತೀಮಾರ್ನಿಸಿದ 3 ಪಕ್ಷದ ಯಾವ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗಿತ್ತು. ಚುನಾವಣೆಯೇ ನಡೆಯಲಿ ಎಂದು ಹೊರ ಹೋಗಿದ್ದ ಅಭ್ಯರ್ಥಿಗಳು ಮತದಾರರನ್ನು ಮತ ಕೇಳುವುದಾಗಲಿ ಬೂತ್​ ಏಜೆಂಟ್​ಗಳನ್ನು ನೇಮಿಸುವುದಾಗಲಿ ಯಾವ ಪ್ರಸಂಗವು ಕಾಣಲಿಲ್ಲ ಶಾಂತಿಯುತ ಮತದಾನ ನಡೆಯಿತು.

ಸಾಲಗಾರ ಕ್ಷೇತ್ರದ ಒಟ್ಟು ಮತಗಳು 651 ಮತಗಳಿಗೆ 600 ಮತಗಳು, ಸಾಲಗಾರರಲ್ಲದ652 ಮತಗಳಿಗೆ 568 ಮತ ಚಲಾವಣೆಯಾದವು. ‘ವೇಮಗಲ್​ ವಿವಿಧೋದ್ದೇಶ ಸಹಕಾರಿ ಸಂಕ್ಕೆ ಆಯ್ಕೆಯಾದ ನಿರ್ದೇಶಕರು ಸರಳವಾಗಿ ವಿಜಯೋತ್ಸವ ಆಚರಿಸಿದರು. ಅಧ್ಯಕ್ಷ ನಂಜುಂಡಗೌಡ, ಚುನಾವಣಾಧಿಕಾರಿ ಎನ್​. ವೆಂಕಟೇಶ್​ಬಾಬು ಮುಖಂಡರು ಇದ್ದರು.

ಮದ್ದೇರಿ ಸೊಸೈಟಿಯ 7 ಸ್ಥಾನ ಕೈ ವಶ

ಕದರೀಪುರ: ಕೋಲಾರ ತಾಲೂಕು ವೇಮಗಲ್ ಹೋಬಳಿಯ ಮದ್ದೇರಿ ಗ್ರಾಮೀಣ ಸಹಕಾರ ಸಂಘಕ್ಕೆ ಶನಿವಾರ ನಿಗದಿಯಾಗಿದ್ದ ಕಾರ್ಯಕಾರಿ ಮಹಾಮಂಡಳಿಯ 12 ಸದಸ್ಯ ಸ್ಥಾನದ ಚುನಾವಣೆಯಲ್ಲಿ 7 ಸ್ಥಾನ ಕಾಂಗ್ರೆಸ್ ವಶವಾದರೆ, 5 ಬಿಜೆಪಿ-ಜೆಡಿಎಸ್ ಮೈತ್ರಿ ಪಾಲಾದವು. 12 ಸ್ಥಾನಗಳಿಗೆ ಕಾಂಗ್ರೆಸ್ 11, ಮೈತ್ರಿ 11, ಪಕ್ಷೇತರ-2 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದರು.

ಮದ್ದೇರಿ ಗ್ರಾಪಂ ವ್ಯಾಪ್ತಿಯ 12 ಹಳ್ಳಿಗಳು, ಸೀತಿ ಗ್ರಾಪಂ ವ್ಯಾಪ್ತಿಯ 6 ಹಳ್ಳಿಗಳಿಗೆ ಒಳಪಟ್ಟ ಒಟ್ಟು18 ಗ್ರಾಮಗಳ ಷೇರುದಾರರನ್ನು ಒಳಗೊಂಡ ಮದ್ದೇರಿ ಸೊಸೈಟಿಯಲ್ಲಿನ 1,428 ಮತದಾರರಲ್ಲಿ 1,294 ಮತಗಳು ಚಲಾವಣೆಗೊಂಡವು.

ಸಾಲಗಾರರ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದ 9 ಮಂದಿಯಲ್ಲಿ ಎಂ.ಎನ್. ಸುರೇಶ್- 205, ಮಂಜುನಾಥ್ ಐ- 199, ಟಿ.ಬೈರಾರೆಡ್ಡಿ-182, ಎಂ. ಚಂದ್ರೆಗೌಡ-173 ಅವರು ಗೆಲುವು ಸಾಧಿಸಿದರು. ಮಹಿಳಾ ಮೀಸಲು ಕ್ಷೇತ್ರದಲ್ಲಿ ನಾಗರತ್ನಮ್ಮ-250, ಭಾಗ್ಯಮ್ಮ-171, ಪ.ಪಂಗಡ ಕ್ಷೇತ್ರದಲ್ಲಿ ನಾರಾಯಣಪ್ಪ 206- ಅವರು 27 ಮತಗಳ ಅಂತರದಲ್ಲಿ ಗೆಲುವು ಸಾಧಿಸಿದರು. ಪ.ಜಾತಿ ಮೀಸಲು ಕ್ಷೇತ್ರದಲ್ಲಿ ಡಿ.ಶ್ರೀನಿವಾಸ್, ಹಿಂದುಳಿದ ವರ್ಗ ಎ ಕ್ಷೇತ್ರದಲ್ಲಿ ಜೆ.ಎನ್.ಮಜುನಾಥ -216, ಹಿಂದುಳಿದ ವರ್ಗ ಬಿ ಕ್ಷೇತ್ರದಲ್ಲಿ ಎನ್.ನಾಗರಾಜ್-235, ಸಾಲಗಾರರಲ್ಲದ ಕ್ಷೇತ್ರದಿಂದ ಎನ್.ವೆಂಕಟಾಚಲಪತಿ- 439 ಅವರು 26 ಮತಗಳ ಅಂತರದಲ್ಲಿ ವಿಜೇತರಾದರು.

ಬೆಳಗ್ಗೆ 10ರಿಂದ ಸಂಜೆ 4 ಗಂಟೆವರೆಗೆ ಮತದಾನ ನಡೆದು, ಸಂಜೆ 4 ರಿಂದ 7.30ವರೆಗೂ ಮತ ಎಣಿಕೆ ಪ್ರಕ್ರಿಯೆ ನಡೆಯಿತು. ಅಂತಿಮವಾಗಿ ಚುನಾವಣೆ ಅಧಿಕಾರಿ ಸಿ ಎಲಿಸ್‌ಕುಮಾರ್ ಅವರು ರಾತ್ರಿ 8 ಗಂಟೆಗೆ ಫಲಿತಾಂಶ ಪ್ರಕಟಣೆ ಮಾಡಿದರು.

ಸುಡು ಬಿಸಲಿನಲ್ಲಿ ಸರತಿಯಲ್ಲಿ ನಿಂತು ಮತದಾರರು ಹಕ್ಕು ಚಲಾಯಿಸಿದರು. ಎಲ್ಲ ಕ್ಷೇತ್ರದಿಂದ ಒಟ್ಟು 111 ಮತದಾರರು ಗೈರು ಆಗಿದ್ದರು.

ಮದ್ದೇರಿ ಸೊಸೈಟಿಯ 5 ವರ್ಷಗಳ ಅವಧಿಯ ಕಾರ್ಯಕಾರಿ ಮಂಡಳಿ ಚುನಾವಣೆ 12 ಸದಸ್ಯರ ಆಯ್ಕೆಗೆ 1 ಸ್ಥಾನ ಠೇವಣಿ ಕ್ಷೇತ್ರದಲ್ಲಿ ಚಂಜಿಮಲೆ ಬಿ.ರಮೇಶ್ ಅವಿರೋಧ ಆಯ್ಕೆಯಾಗಿ 11 ಸ್ಥಾನಗಳಿಗೆ ಚುನಾವಣೆ ಶಾಂತಿಯುತವಾಗಿ ನಡೆಯಿತು.