ನೆಲ್ಲೂರುಪಾಲ-ಮೂರ್ಕಲ್ ಮಾರ್ಗದ ವೀರನಹೊಸಹಳ್ಳಿ ಗೇಟ್ ಒಳಭಾಗದಲ್ಲಿ 5 ಕಿ.ಮೀ.ನಷ್ಟು ಡಾಂಬರೀಕರಣ  
ಜಿಲ್ಲೆ

12 ರವರೆಗೆ ವಾಹನಗಳ ಸಂಚಾರಕ್ಕೆ ನಿಷೇಧ

ಹನಗೋಡು: ಲೋಕೋಪಯೋಗಿ ಇಲಾಖೆಯ ಹುಣಸೂರು ಉಪವಿಭಾಗ ವತಿಯಿಂದ ನಾಗರಹೊಳೆ ಸಂರಕ್ಷಿತ ಪ್ರದೇಶ ವ್ಯಾಪ್ತಿಯ ನೆಲ್ಲೂರುಪಾಲ-ಮೂರ್ಕಲ್ ಮಾರ್ಗದ ವೀರನಹೊಸಹಳ್ಳಿ ಗೇಟ್ ಒಳಭಾಗದಲ್ಲಿ 5 ಕಿ.ಮೀ.ನಷ್ಟು ಡಾಂಬರೀಕರಣ ನಡೆಯಲಿದೆ.

ಮೇ 6ರಿಂದ 12 ರವರೆಗೆ ರಸ್ತೆ ಅಭಿವೃದ್ಧಿ ಕಾಮಗಾರಿ ನಡೆಯಲಿದ್ದು, ವಾಹನಗಳ ಸಂಚಾರವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.

ಕಾಮಗಾರಿ ಪೂರ್ಣಗೊಳ್ಳುವವರೆಗೆ ಖಾಸಗಿ ವಾಹನಗಳು ಮತ್ತು ಕೆಎಸ್‌ಆರ್‌ಟಿಸಿ ಬಸ್‌ಗಳ ಸಂಚಾರಕ್ಕೆವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ರಸ್ತೆ ಡಾಂಬರೀಕರಣಕ್ಕೆ ಸಹಕರಿಸುವಂತೆ ನಾಗರಹೊಳೆ ಹುಲಿ ಯೋಜನೆಯ ಉಪ ಅರಣ್ಯ ನಿರ್ದೇಶಕರು ಹಾಗೂ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಮನವಿ ಮಾಡಿದ್ದಾರೆ.