ಜಿಲ್ಲೆ

ವಾಹನದಲ್ಲೇ ರಾತ್ರಿ ಕಳೆದ ಪ್ರಯಾಣಿಕರು!

Chikkamagaluru

ಬಣಕಲ್: ಚಾರ್ಮಾಡಿ ಘಾಟಿಯಲ್ಲಿ ರಾತ್ರಿ ಸಂಚಾರ ನಿಷೇಧದ ಮಾಹಿತಿ ತಿಳಿಯದ ಪ್ರಯಾಣಿಕರು ಗುರುವಾರ ರಾತ್ರಿ ಇಡೀ ರಸ್ತೆಯಲ್ಲೇ ಕಾಲ ಕಳೆದಿದ್ದಾರೆ.

ಮಳೆಗಾಲ ಆರಂಭ ಆಗಿರುವುದರಿಂದ ಮುಂಜಾಗ್ರತಾ ಕ್ರಮವಾಗಿ ಚಾರ್ವಡಿ ಘಾಟಿಯಲ್ಲಿ ರಾತ್ರಿ 7ರಿಂದ ಬೆಳಗ್ಗೆ 7ರವರೆಗೆ ಎಲ್ಲ ವಿಧದ ವಾಹನ ಸಂಚಾರ ನಿಷೇಧಿಸಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದರು. ಮೊದಲ ದಿನವಾದ ಗುರುವಾರ ವಾಹನ ಸಂಚಾರ ನಿಷೇಧವಿರುವ ಮಾಹಿತಿ ಇಲ್ಲದೆ ಬಂದ ಪ್ರಯಾಣಿಕರ ವಾಹನಗಳು ಕೊಟ್ಟಿಗೆಹಾರದಲ್ಲಿ ಸಾಲುಗಟ್ಟಿ ನಿಂತಿದ್ದವು.

ಕೆಲ ಪ್ರಯಾಣಿಕರು ಚಾರ್ವಡಿ ಘಾಟಿ ಮೂಲಕ ಪ್ರಯಾಣಿಸಲು ಸಾಧ್ಯವಾಗದೆ ಹಿಂದಿರುಗಿದರೆ ಮತ್ತೆ ಕೆಲವರು ಕೊಟ್ಟಿಗೆಹಾರದಲ್ಲೇ ವಾಹನ ನಿಲ್ಲಿಸಿ ರಾತ್ರಿ ಕಳೆದು ಶುಕ್ರವಾರ ಬೆಳಗ್ಗೆ ಪ್ರಯಾಣ ಮುಂದುವರಿಸಿದರು.