ಸಿರಗುಪ್ಪ: ತೆಕ್ಕಲಕೋಟೆ ಸಮೀಪದ ರಾಷ್ಟ್ರೀಯ ಹೆದ್ದಾರಿ 150ಎಯಲ್ಲಿ ವಾಹನಗಳ ವೇಗ ನಿಯಂತ್ರಣಕ್ಕೆ ಸ್ಥಳೀಯ ಪೊಲೀಸರು ಗುರುವಾರ ಸ್ಪೀಡ್ ಲೇಸರ್ ಗನ್ ಮೂಲಕ ಶನಿವಾರ ಕಾರ್ಯಾಚರಣೆ ಆರಂಭಿಸಿದರು.
ತೆಕ್ಕಲಕೋಟೆ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಬಳಿ ವೇಗ ನಿಯಂತ್ರಕ ಫಲಕ ಹಾಕಿದ್ದು, 50 ಕಿಮೀ ಮಿತಿ ನಿಗದಿಪಡಿಸಲಾಗಿದೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುವ ವಾಹನಗಳ ವೇಗವನ್ನು ತೆಕ್ಕಲಕೋಟೆ ಠಾಣೆ ಸಿಬ್ಬಂದಿ ತಪಾಸಣೆ ಮಾಡುತ್ತಿದ್ದಾರೆ.
ಶನಿವಾರ ಅತಿವೇಗವಾಗಿ ಸಂಚರಿಸಿದ 27 ವಾಹನಗಳ ಮಾಲೀಕರಿಗೆ ದಂಡ ವಿಧಿಸಲಾಗಿದೆ. ಸ್ಪೀಡ್ ಲೇಸರ್ ಗನ್ ಮೂಲಕ ವಾಹನಗಳ ವೇಗ ನಿಯಂತ್ರಣದ ಮೇಲೆ ಹದ್ದಿನ ಕಣ್ಣಿಡಲಾಗಿದೆ. ಅಪಘಾತ ನಿಯಂತ್ರಿಸುವುದು ಇದರ ಉದ್ದೇಶವೆಂದು ಪಿಎಸ್‌ಐ ಶಾಂತಮೂರ್ತಿ ತಿಳಿಸಿದರು.
ಎಎಸ್‌ಐ ಎಸ್.ಮಲ್ಲಯ್ಯ, ಪೇದೆಗಳಾದ ಮಂಜುನಾಥ, ಮಣಿಕಂಠ, ಲಿಂಗಾರಡ್ಡಿ, ರಸೂಲ್‌ಸಾಬ್ ಇದ್ದರು.