ಸಂಡೂರು: ಶಾಲಾ ಮಕ್ಕಳನ್ನು ಕರೆ ತರುವ ಆಟೋಗಳ ವೇಗ ನಿಯಂತ್ರಿಸಬೇಕೆಂದು ಒತ್ತಾಯಿಸಿ ತಾಲೂಕು ಕಚೇರಿಯ ಶಿರಸ್ತೆದಾರ ಕೆ.ಎಂ.ಶಿವಕುಮಾರ್‌ಗೆ ಶುಕ್ರವಾರ ಮನವಿ ಸಲ್ಲಿಸಿದರು.
ಇದನ್ನೂ ಓದಿ: ವಿವೇಕ ಪ್ರೌಢಶಾಲಾ ವಿಭಾಗದ ಮುಖ್ಯಸ್ಥರ ಆಯ್ಕೆ
ಸಂಘದ ಉಪಾಧ್ಯಕ್ಷ ಕೆ.ಕೆ.ದಾದಾ ಖಲಂದರ್ ಮಾತನಾಡಿ, ತಾಲೂಕಿನ ಹಳ್ಳಿಗಳಿಂದ ಪಟ್ಟಣದ ಶಾಲಾ-ಕಾಲೇಜಿಗೆ ಮಕ್ಕಳನ್ನು ಕರೆತರುವ ಆಟೋ ಚಾಲಕರು ಮಿತಿಮೀರಿ ಮಕ್ಕಳನ್ನು ತುಂಬಿಕೊಂಡು ಅಜಾಗರೂಕತೆಯಿಂದ ವೇಗವಾಗಿ ಚಲಾಯಿಸುತ್ತಿದ್ದರೆ. ಲಕ್ಷ್ಮೀಪುರದ ಒಂದೇ ಕುಟುಂಬದ ಇಬ್ಬರು ಮಕ್ಕಳು ಸೇರಿ ಐವರು ಆಪಘಾತದಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ.
ಆದ್ದರಿಂದ ಪಟ್ಟಣದಲ್ಲಿ ಓಡಾಡುವ ಆಟೋ ಸೇರಿ ಎಲ್ಲ ವಾಹನಗಳ ಚಾಲಕರ ದಾಖಲಾತಿಗಳನ್ನು ಪರಿಶೀಲನೆ ಮಾಡಿ. ಮಧ್ಯಪಾನ ಮಾಡುವವರ ಮತ್ತು ಸರಿಯಾದ ದಾಖಲೆಗಳಿಲ್ಲದ ವಾಹನಗಳ ಚಾಲನೆ ರದ್ದಪಡಿಸಿ. ಇತ್ತೀಚಿಗೆ ಆಪ್ರಾಪ್ತ ಬಾಲಕರು ವ್ಹಿಲಿಂಗ್ ಮಾಡುತ್ತಿರುವುದು ಕಂಡು ಬಂದಿದ್ದು, ತಾವು ಚಾಲನೆ ಮಾಡುವುದಲ್ಲದೆ ಬೇರೆಯವರ ಪ್ರಾಣಕ್ಕೆ ಕುತ್ತು ತರುವ ಸಂಭವವಿದೆ. ಆದ್ದರಿಂದ, ಅಧಿಕಾರಿಗಳಿಗೆ ಸೂಚನೆ ನೀಡಬೇಕೆಂದರು.