ಜಿಲ್ಲೆ

ಧರ್ಮಸ್ಥಳಕ್ಕೆ ವಾಹನ ಜಾಥಾ

ಸೌಮ್ಯ ಆರ್

ಬೆಳ್ತಂಗಡಿ: ಬಿಜೆಪಿಯಿಂದ ಮತ್ತೊಂದು ತಂಡ ಧರ್ಮಸ್ಥಳಕ್ಕೆ ವಾಹನ ಜಾಥಾ ಗುರುವಾರ ನಡೆಸಿತು.

ಬ್ಯಾಟರಾಯನಪುರ ಕ್ಷೇತ್ರದ ಬಿಜೆಪಿ ಘಟಕ ಕೊಡಿಗೆಹಳ್ಳಿ ಗೇಟ್‌ನ ಗುಂಡಾಂಜನೇಯ ದೇವಸ್ಥಾನದಿಂದ ಬಿಜೆಪಿ ರಾಜ್ಯ ಕಾರ್ಯದರ್ಶಿ ತಮ್ಮೇಶ್ ಗೌಡ, ಬೆಂಗಳೂರು ಉತ್ತರ ಬಿಜೆಪಿ ಜಿಲ್ಲಾಧ್ಯಕ್ಷ ಎಸ್.ಹರೀಶ್ ನೇತೃತ್ವದಲ್ಲಿ ಜಾಥಾ ಹೊರಟು ಸಂಜೆ ಧರ್ಮಸ್ಥಳ ತಲುಪಿತು. ಧರ್ಮಸ್ಥಳಕ್ಕೆ ಆಗಮಿಸಿದ ತಂಡ ಶ್ರೀ ಮಂಜುನಾಥ ಸ್ವಾಮಿಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿತು.

ಎಸ್‌ಐಟಿ ತನಿಖೆ ನೆಪದಲ್ಲಿ ಧರ್ಮಸ್ಥಳದ ವಿರುದ್ಧ ಅಪಪ್ರಚಾರ ಮಾಡುತ್ತಿದ್ದಾರೆ. ಇದನ್ನು ವಿರೋಧಿಸಿ, ಇದರ ಹಿಂದೆ ನಡೆಯುತ್ತಿರುವ ಷಡ್ಯಂತ್ರದ ಬಗ್ಗೆ ಗೊತ್ತಾಗಬೇಕು. ನಾವು ಧರ್ಮಸ್ಥಳದ ಜತೆಗೆ ಇದ್ದೇವೆ ಎಂಬ ಉದ್ದೇಶದ ಈ ಯಾತ್ರೆಯಲ್ಲಿ ಹಲವಾರು ಮುಖಂಡರು ಹಾಗೂ ನೂರಾರು ವಾಹನಗಳು ಭಾಗವಹಿಸಿದ್ದವು.