ಜಿಲ್ಲೆ

ಮರ ಬಿದ್ದು ಕಾಪು-ಶಿರ್ವ ರಸ್ತೆ ಸಂಚಾರ ಸ್ಥಗಿತ

Udupi

ಪಡುಬಿದ್ರಿ: ಭಾರಿ ಗಾಳಿ ಮಳೆಯಿಂದಾಗಿ ಕಾಪು ಶ್ರೀ ಲಕ್ಷ್ಮೀ ಜನಾರ್ದನ ದೇವಸ್ಥಾನದ ಸಮೀಪ ರಸ್ತೆಗೆ ಮರ ಬಿದ್ದು ಕಾಪು-ಶಿರ್ವ ನಡುವಿನ ಸಂಚಾರಕ್ಕೆ ಮಂಗಳವಾರ ಮುಂಜಾನೆ ತಡೆಯುಂಟಾಯಿತು. ಪರಿಣಾಮ ಈ ರಸ್ತೆಯಲ್ಲಿ ಸಂಚರಿಸುವ ಮತ್ತು ಮಜೂರು, ಮಲ್ಲಾರು, ಚಂದ್ರನಗರ, ಬೆಳಪು, ಕಳತ್ತೂರು ಸಹಿತ ವಿವಿಧೆಡೆಗಳಿಂದ ಕಾಪುವಿಗೆ ಆಗಮಿಸುವ ನಾಗರಿಕರು ತೊಂದರೆ ಅನುಭವಿಸಿದರು.

ಸಂಚಾರಕ್ಕೆ ತಡೆಯುಂಟಾಗಿರುವ ಬಗ್ಗೆ ಮಾಹಿತಿ ಪಡೆದ ಸ್ಥಳೀಯ ಸಮಾಜ ಸೇವಕ ಪ್ರಶಾಂತ್ ಪೂಜಾರಿ ಕೊಂಬಗುಡ್ಡೆ, ಉಮೇಶ್ ಶೆಟ್ಟಿ, ನಾಗೇಶ್ ಭಂಡಾರಿ ಸಹಿತ ಸ್ಥಳೀಯರು ಮರ ತೆರವುಗೊಳಿಸಿದರು. ಅರಣ್ಯ ರಕ್ಷಕ ಮಂಜುನಾಥ ಸ್ಥಳಕ್ಕೆ ಭೇಟಿ ನೀಡಿದ್ದು, ಕಾಪು ಪೊಲೀಸರು ಸಂಚಾರ ನಿಯಂತ್ರಣಕ್ಕೆ ಕ್ರಮ ವಹಿಸಿದರು.