ಮಂಡ್ಯ: ನಾಗಮಂಗಲ-ಮಂಡ್ಯ ಮುಖ್ಯರಸ್ತೆಯ ನರಗಲು ಸಮೀಪ ಶನಿವಾರ ಐಸ್‌ಕ್ರೀಂ ಡೆಲಿವರಿ ವಾಹನ ಅಡ್ಡಹಾಕಿದ ನಾಲ್ವರು ದುಷ್ಕರ್ಮಿಗಳು 1.90 ಲಕ್ಷ ರೂ ನಗದು ಮತ್ತು ಮೊಬೈಲ್ ದೋಚಿ ಪರಾರಿಯಾಗಿದ್ದಾರೆ.
ಮಂಡ್ಯ ನಗರದ ಮನೋಜ್‌ಗೌಡ ಎಂಬುವರೇ ಹಣ ಕಳೆದುಕೊಂಡವರು. ಈತ ತನ್ನ ಅಶೋಕ ಲೈಲ್ಯಾಂಡ್ ವಾಹನದಲ್ಲಿ ಸಹಾಯಕ ವರುಣಕುಮಾರ್ ಎಂಬುವರೊಂದಿಗೆ ಆದಿಚುಂಚನಗಿರಿ ಹೋಗಿ ಐಸ್‌ಕ್ರೀಂ ಡೆಲಿವರಿ ಕೊಟ್ಟು ಹಣ ಪಡೆದುಕೊಂಡು ವಾಪಸ್ ಬರುತ್ತಿದ್ದರು. ಈ ವೇಳೆ ಎರಡು ಬೈಕ್‌ನಲ್ಲಿ ಬಂದ ನಾಲ್ವರು ದುಷ್ಕರ್ಮಿಗಳು, ಮನೋಜ್‌ಗೌಡ ಮತ್ತು ವರುಣಕುಮಾರ್ ಕಣ್ಣಿಗೆ ಕಾರದಪುಡಿ ಎರಚಿ ವಾಹನ ನಿಲ್ಲಿಸಿದ್ದಾರೆ. ಮಾತ್ರವಲ್ಲದೆ ಲಾಂಗ್‌ನಿಂದ ಗ್ಲಾಸ್ ಹೊಡೆದು ಇಬ್ಬರು ಬೆದರಿಸಿ ಹಣ ಮತ್ತು ಮೊಬೈಲ್ ದೋಚಿದ್ದಾರೆ. ಘಟನೆ ಸಂಬಂಧ ಬಸರಾಳು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.